6

ಮದುವೆ ಮನೆಯಲ್ಲಿ ಮನಸ್ತಾಪ: ಹಳೆ ದ್ವೇಷ.. ಹೊಸ ಹೊಡೆದಾಟ!

ಭಟ್ಕಳ: ಕೋಟೆಮನೆ ತಲಗೋಡಿನ ಶರತ್ ನಾಯ್ಕ ಹಾಗೂ ಅವರ ಅಕ್ಕನ ತಮ್ಮ ಗಣಪತಿ ನಾಯ್ಕ ನಡುವೆ ಹೊಡೆದಾಟ ನಡೆದಿದೆ.

ಗಣಪತಿ ಶಂಕರ್ ನಾಯ್ಕ ಎಂಬಾತರು ಶರತ ರಾಮಚಂದ್ರ ನಾಯ್ಕರ ಅಕ್ಕನನ್ನು ಮದುವೆಯಾಗಿದ್ದು, ಮದುವೆ ದಿನದಿಂದಲೂ ಭಾವ-ಬಾಮೈದರ ನಡುವೆ ಮನಸ್ತಾಪವಿತ್ತು. ಅಕ್ಟೊಬರ್ 23ರಂದು ನಡೆದ ವಿಷ್ಣು ನಾಯ್ಕ ಅವರ ಮದುವೆಯಲ್ಲಿ ಈ ಎಲ್ಲರೂ ಭಾಗವಹಿಸಿದ್ದರು. ಮದುವೆ ಮರುದಿನ ರಾತ್ರಿ ಊಟದ ವೇಳೆ ಶರತ್ ನಾಯ್ಕ ತನ್ನ ಸಹಚರರಾದ ಸುರೇಶ ನಾಗಪ್ಪ ನಾಯ್ಕ ಹಾಗೂ ಹರ್ಷ ಮಂಜುನಾಥ ನಾಯ್ಕರನ್ನು ಕರೆದುಕೊಂಡು ಬಂದು ಗಲಾಟೆ ಮಾಡಿದ್ದು, ಈ ವೇಳೆ ಹೊಡೆದಾಟ ನಡೆದಿದೆ.

ಶರತ್ ನಾಯ್ಕ ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಗಣಪತಿ ನಾಯ್ಕರ ಮೇಲೆ ಹಲ್ಲೆ ನಡೆಸಿದ ಆರೋಪವಿದೆ. ಭಾವನನ್ನು ಕೊಲೆ ಮಾಡುವ ಉದ್ದೇಶದಿಂದ ಆತ ಈ ಕೃತ್ಯ ಎಸಗಿರುವ ಬಗ್ಗೆ ಅಲ್ಲಿದ್ದ ರವಿ ಗೋವಿಂದ ನಾಯ್ಕ ಪೊಲೀಸರಿಗೆ ದೂರಿದ್ದಾರೆ. `ಮೂವರು ಸೇರಿ ಗಣಪತಿ ನಾಯ್ಕರ ಮೇಲೆ ಹಲ್ಲೆ ನಡೆಸಿದ್ದರಿಂದ ಗಣಪತಿ ನಾಯ್ಕರು ಗಾಯಗೊಂಡಿದ್ದಾರೆ. ಈ ವೇಳೆ ಭಾಸ್ಕರ ಹಾಗೂ ರಾಘವ ಎಂಬಾತರು ಈ ಜಗಳ ತಪ್ಪಿಸಿದರು’ ಎಂದು ದೂರುದಾರರು ವಿವರಿಸಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page