6

ಅಲ್ಲಿ ನಿರಪರಾಧಿ.. ಶಿರಸಿಯಲ್ಲಿ ಅಪರಾಧಿ!

ಶಿರಸಿ: ಸೂಕ್ತ ಸಾಕ್ಷಿ ಸಿಗದೇ ದಾವಣಗೆರೆ ನ್ಯಾಯಾಲಯ ವಿಧಿಸಬಹುದಾದ ಶಿಕ್ಷೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಇಬ್ಬರು ಡಕಾಯಿತರಿಗೆ ಶಿರಸಿ ನ್ಯಾಯಾಲಯ ಯೋಗ್ಯ ಶಿಕ್ಷೆ ವಿಧಿಸಿದೆ.

ಮಾರಣಾಂತಿಕ ಹಲ್ಲೆ, ಮನೆ ದರೊಡೆ ಮಾಡುವುದನ್ನು ಉದ್ಯೋಗವನ್ನಾಗಿಸಿಕೊಂಡಿದ್ದ ಬಹೂದ್ದೂರ್ ಸಿಂಗ್ ಹಾಗೂ ಸೂರಬ್ ಎಂಬಾತರಿಗೆ ಶಿರಸಿ ನ್ಯಾಯಾಧೀಶ ಕಿರಣ ಕಿಣಿ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ. ಮದ್ಯಪ್ರದೇಶದ ಈ ಇಬ್ಬರು ಕರ್ನಾಟಕಕ್ಕೆ ಆಗಮಿಸಿ ಅನೇಕರ ಮೇಲೆ ಹಲ್ಲೆ ನಡೆಸಿದ್ದರು. ಒಂಟಿ ಮನೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿದ್ದ ಅವರು ಮನೆಯಲ್ಲಿದ್ದವರನ್ನು ಥಳಿಸಿ ಚಿನ್ನ, ಬೆಳ್ಳಿ, ಹಣ ಹಾಗೂ ಮೊಬೈಲ್ ದೋಚಿ ಪರಾರಿಯಾಗುತ್ತಿದ್ದರು.

ದಾವಣಗೆರೆಯಲ್ಲಿ ನಡೆದ ಪ್ರಕರಣವೊಂದರಲ್ಲಿ ಅವರು ಆರೋಪಿಗಳಾಗಿದ್ದು, ಆ ಪ್ರಕರಣದಿಂದ ಖುಲಾಸೆಯಾಗಿದ್ದರು. ಆದರೆ, ಶಿರಸಿಯಲ್ಲಿ ನಡೆದ ಪ್ರಕರಣಕ್ಕೆ ಸಂಬAಧಿಸಿ ಆರೋಪವಿದ್ದರೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ತಲೆಮರೆಸಿಕೊಂಡಿದ್ದ ಈ ಇಬ್ಬರನ್ನು ಪಿಎಸ್‌ಸೈ ರತ್ನಾ ಕುರಿ ಅವರ ಊರಿಗೆ ತೆರಳಿ ಬಂಧಿಸಿದ್ದರು. 2017ರಲ್ಲಿ ಭಾಗಿರಥಿ ಬಾಳೆಮನೆ ಎಂಬಾತರ ಮನೆಗೆ ನುಗ್ಗಿ ಅವರಿಗೆ ಹಾಗೂ ಅವರ ಮಗಳು ಶಾಂತಲಾ ಎಂಬಾತರಿಗೆ ಹಲ್ಲೆ ನಡೆಸಿದ ಆರೋಪ ಡಕಾಯಿತರ ಮೇಲಿತ್ತು.

ಆ ವೇಳೆ ಭಾಗಿರಥಿ ಅವರ ಮನೆಯಲ್ಲಿದ್ದ ಒಡವೆಗಳನ್ನು ಅವರು ಅಪಹರಿಸಿದ್ದರು. ಹಣ ಹಾಗೂ ಮೊಬೈಲ್ ಸಹ ದೋಚಿ ಪರಾರಿಯಾಗಿದ್ದರು. ಶಿರಸಿಯ ವಿದ್ಯಾನಗರ ಮತ್ತು ಸಹ್ಯಾದ್ರಿ ಕಾಲೋನಿಯಲ್ಲಿ ನಡೆದ ಮನೆ ದರೋಡೆ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಎಲ್ಲಾ ಸಾಕ್ಷಿ ಹಾಗೂ ದಾಖಲೆ ಪರಿಶೀಲಿಸಿ ಆದೇಶ ಹೊರಡಿಸಿದೆ. ಅದರ ಪ್ರಕಾರ ಬಹೂದ್ದೂರ್ ಸಿಂಗ್ ಹಾಗೂ ಸೂರಬ್’ಗೆ ಜೀವಾವಧಿ ಶಿಕ್ಷೆ ಜೊತೆ 10 ಸಾವಿರ ರೂ ದಂಡ ವಿಧಿಸಿದೆ. ಸರಕಾರಿ ಅಭಿಯೋಜಕರಾದ ರಾಜೇಶ ಎಂ ಮಳಗಿಕರ ಅವರು ಸಂತ್ರಸ್ತರ ಪರ ವಾದ ಮಂಡಿಸಿದ್ದರು.

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page