6

ಯಲ್ಲಾಪುರ ನ್ಯೂಸ್: ಪತ್ರಕರ್ತ ಜಗದೀಶ ನಾಯ್ಕ ಇನ್ನಿಲ್ಲ

ಯಲ್ಲಾಪುರ: ಕಳೆದ ಐದಾರು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದ ಪತ್ರಕರ್ತ ಜಗದೀಶ ನಾಯ್ಕ ಶನಿವಾರ ರಾತ್ರಿ ಸಾವನಪ್ಪಿದ್ದಾರೆ.

ಬಹು ಅಂಗಾ0ಗ ವೈಕಲ್ಯದಿಂದ ಅವರು ಬಳಲುತ್ತಿದ್ದರು. ಶನಿವಾರ ಬೆಳಗ್ಗೆ ಅವರ ಆರೋಗ್ಯ ಹದಗೆಟ್ಟಿತ್ತು. ಕೊನೆ ಕ್ಷಣದವರೆಗೂ ಬದುಕಿಸಿಕೊಳ್ಳುವ ಪ್ರಯತ್ನ ನಡೆಯಿತು. ಶನಿವಾರ ಸಂಜೆ ಹುಬ್ಬಳ್ಳಿ ಆಸ್ಪತ್ರೆಯಿಂದ ಅವರನ್ನು ಯಲ್ಲಾಪುರಕ್ಕೆ ಕರೆ ತರಲಾಗಿದ್ದು, ಈ ವೇಳೆಯಲ್ಲಿಯೇ ಅವರು ಕೊನೆ ಉಸಿರೆಳೆದರು.

ಜಗದೀಶ ನಾಯ್ಕ ಅವರು ಮೊದಲು `ಕರಾವಳಿ ಮುಂಜಾವು’ ಪತ್ರಿಕೆಯ ಪ್ರತಿನಿಧಿಯಾಗಿದ್ದರು. `ಕಾರವಾರ ಕಚೇರಿಯಲ್ಲಿ ಪ್ರಜಾವಾಣಿ’ ಪತ್ರಿಕೆಯ ಸಹಾಯಕ ವರದಿಗಾರರಾಗಿಯೂ ಕೆಲಸ ಮಾಡಿದ್ದರು. ನುಡಿಜೇನು, ಕಡಲವಾಣಿ ಸೇರಿ ವಿವಿಧ ಪತ್ರಿಕೆಗಳಿಗೆ ಅವರು ವರದಿ ರವಾನಿಸುತ್ತಿದ್ದರು. `Yellapur News’ ಎಂಬ ವೆಬ್ ಪೋರ್ಟಲ್ ಸ್ಥಾಪಿಸಿ ಅದರ ಮೂಲಕವೂ ಯಲ್ಲಾಪುರ ಭಾಗದ ವರದಿಗಳನ್ನು ಪ್ರಸಾರ ಮಾಡುತ್ತಿದ್ದರು. ಪತ್ರಿಕೋದ್ಯಮಕ್ಕೆ ಬರುವ ಮುನ್ನ ಟಿವಿ ರಿಪೇರಿ ಮಾಡಿ ಬದುಕು ಕಟ್ಟಿಕೊಂಡಿದ್ದರು. 20 ವರ್ಷಕ್ಕೂ ಅಧಿಕ ಕಾಲ ಅವರು ಪತ್ರಿಕೋದ್ಯಮದಲ್ಲಿದ್ದರು.  ಭಾನುವಾರ ಬೆಳಗ್ಗೆ ಜಗದೀಶ ನಾಯ್ಕ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page