6

ಮೂರೇ ತಿಂಗಳಿನಲ್ಲಿ ಕೋಟ್ಯಧಿಪತಿ: ನಂಬಿದವರಿಗೆ ಮಕ್ಮಲ್ ಟೋಪಿ!

ಹೊನ್ನಾವರ: ಆನ್‌ಲೈನ್ ಟ್ರೆಂಡಿoಗ್ ಮೂಲಕ 41 ಲಕ್ಷ ರೂ ಹೂಡಿಕೆ ಮಾಡಿದ ಕೆ ಕೃಷ್ಣಕಾಂತ ಅವರಿಗೆ 1.60 ಕೋಟಿ ರೂ ಲಾಭ ಕಾಣಿಸಿದ್ದು, ಆ ಹಣ ಪಡೆಯಲು ಮಾತ್ರ ಸಾಧ್ಯವಾಗಿಲ್ಲ!

ಚಿಕ್ಕಮಗಳೂರಿನ ಕೃಷ್ಣಕಾಂತ ಅವರು ಕರ್ಕಿ ಹೈಚರ್ಚ ಬಳಿ ವಾಸವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಕಡಿಮೆ ಅವಧಿಯಲ್ಲಿ ಹಣ ಮಾಡುವ ಟ್ರೇಡಿಂಗ್ ಜಾಹೀರಾತು ಬಂದಿದ್ದು, ಅದನ್ನು ನಂಬಿ ಅವರು ಹಣ ಕಳೆದುಕೊಂಡಿದ್ದಾರೆ.

ಜುಲೈ 20ರಂದು ಆನ್‌ಲೈನ್ ಟ್ರೆಂಡಿoಗ್ ಮೂಲಕ ಹೆಚ್ಚು ಹಣ ಮಾಡುವ ವಿಚಾರಕ್ಕೆ ಬಿದ್ದ ಅವರು `ಕಳ್ಳರ ಬಳಗ’ದ ಗ್ರೂಪ್ ಸೇರಿದ್ದಾರೆ. ಅವರು ಹೇಳಿದ ಕಡೆಗಳೆಲ್ಲ ಹೂಡಿಕೆ ಮಾಡಿದ್ದಾರೆ. ಒಟ್ಟು 41.27 ಲಕ್ಷ ರೂ ಹೂಡಿಕೆ ಮಾಡಿದಾಗ 1.60 ಕೋಟಿ ರೂ ಲಾಭ ಬಂದಿರುವುದಾಗಿ ಅವರನ್ನು ವಂಚಕರು ನಂಬಿಸಿದ್ದಾರೆ.

`ಈ ಹಣ ತೆಗೆಯಬೇಕು’ ಎಂದಾಗ `ಇನ್ನೂ 1 ತಿಂಗಳು ಕಾದರೆ ಇನ್ನಷ್ಟು ಹಣ ಸಿಗುತ್ತದೆ’ ಎಂದು ನಂಬಿಸಿ ಅವರನ್ನು ಗ್ರೂಪಿನಿಂದ ಹೊರ ದಬ್ಬಿದ್ದಾರೆ.
ಮೋಸ ಹೋದ ಕೃಷ್ಣಕಾಂತ ಇದೀಗ ಪೊಲೀಸ್ ದೂರು ನೀಡಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page