6

ಆಯುಷ್ಮಾನ್ ಕೇಂದ್ರದಲ್ಲಿ ಪುನೀತ್ ರಾಜಕುಮಾರರ ಸ್ಮರಣೆ: ನೇತ್ರದಾನಕ್ಕೆ ಕರೆ ನೀಡಿದ ಆರೋಗ್ಯಾಧಿಕಾರಿ

ಕಾರವಾರ: ಸದಾಶಿವಗಡ ವ್ಯಾಪ್ತಿಯ ಕಣಸಗಿರಿಯ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ಮಂಗಳವಾರ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆದಿದ್ದು, ನಟ ಪುನೀತರಾಜಕುಮಾರ ಅವರನ್ನು ಸ್ಮರಿಸಿ ನೇತ್ರದಾನದ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು.

ಪುನೀತರಾಜಕುಮಾರ್ ಅವರ ನಡೆ-ನುಡಿಯ ಗುಣಗಾನ ಮಾಡಿದ ಸಮುದಾಯ ಆರೋಗ್ಯ ಅಧಿಕಾರಿ ನಾಗರತ್ನ ನಾಯ್ಕ ಅವರು ನೇತ್ರದಾನ, ಅಂಗಾAಗ ದಾನಗಳ ಮಹತ್ವದ ಬಗ್ಗೆ ನೆರೆದಿದ್ದವರಿಗೆ ವಿವರಿಸಿದರು. ಅಂಗಾAಗ ದಾನ ಮಾಡುವ ವಿಧಾನ ಹಾಗೂ ಅದರ ಪ್ರಕ್ರಿಯೆಗಳ ಬಗ್ಗೆ ಅವರು ವಿಸ್ತಾರವಾಗಿ ಮಾತನಾಡಿದರು.

ಗ್ರಾಮ ಆರೋಗ್ಯ ಶಿಬಿರವನ್ನು ಉದ್ಘಾಟಿಸಿದ ಚಿತ್ತಾಕುಲ ಗ್ರಾ ಪಂ ಸದಸ್ಯೆ ದಿಯಾ ನಾಯ್ಕ `ಗ್ರಾಮದಲ್ಲಿ ನಡೆಯುವ ಆರೋಗ್ಯ ಶಿಬಿರಗಳು ಜನರಿಗೆ ಅನುಕೂಲ ಮಾಡಿಕೊಟ್ಟಿವೆ. ಮರಣ ನಂತರ ನಮ್ಮ ಕಣ್ಣು ಹಾಗೂ ಅಂಗಾAಗಗಳನ್ನು ಇತರರಿಗೆ ನೀಡುವುದು ಪುಣ್ಯ ಕಾರ್ಯ’ ಎಂದು ಹೇಳಿದರು.

54 ಜನರಿಗೆ ವಿವಿಧ ರೋಗಗಳ ತಪಾಸಣೆ ನಡೆಸಿ ಆರೋಗ್ಯ ಸಲಹೆ ನೀಡಲಾಯಿತು. ಬಿಪಿ, ಮಧುಮೇಹ, ಹಿಮೋಗ್ಲೋಬಿನ್ ಪರೀಕ್ಷೆ ನಡೆಸಿ ಜೀವನ ಶೈಲಿ ಬದಲಾವಣೆಯಿಂದ ರೋಗ ಬಾರದಂತೆ ತಡೆಯುವ ಬಗ್ಗೆ ಮಾಹಿತಿ ನೀಡಲಾಯಿತು. ಅಂಗನವಾಡಿ ಕಾರ್ಯಕರ್ತೆ ಸೌಮ್ಯ ಸಾವಂತ್ ಹಾಗೂ ಸೇಜಲ್, ಆಶಾ ಕಾರ್ಯಕರ್ತೆ ದಿವ್ಯ ದೀಪಕ್ ನಾಯ್ಕ, ಐಶ್ವರ್ಯ ವಿವೇಕ ಕಲಗುಟ್ಕಾರ್ ಈ ಕಾರ್ಯಕ್ರಮದಲ್ಲಿದ್ದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page