6

ರೈತರ ಭೂಮಿ ಸರ್ಕಾರದ ಪಾಲು: ಬಿಜೆಪಿ ಹೋರಾಟ ಎಲ್ಲಿ? ಯಾವಾಗ?

ರಾತ್ರಿ ಬೆಳಗಾಗುವುದರೊಳಗೆ ನೂರಾರು ಎಕರೆ ರೈತರ ಭೂಮಿ ದಾಖಲೆ ಸರ್ಕಾರಿ ಅಧೀನದ ವಕ್ಟ್ ಬೋರ್ಡ ಹೆಸರಿಗೆ ಬದಲಾಗುತ್ತಿದೆ. ಭೂಮಿ ಹಕ್ಕು ಗುರುತಿಸುವಿಕೆಯಲ್ಲಿ ಮುಖ್ಯ ಪಾತ್ರ ನಿಭಾಯಿಸುವ ಪಹಣಿ ಪತ್ರಿಕೆಯಲ್ಲಿ ವಕ್ಟ್ ಬೋರ್ಡಿನ ಹೆಸರು ನಮೂದಾಗಿರುವುದರಿಂದ ರಾಜ್ಯದ ರೈತರು ಕಂಗಾಲಾಗಿದ್ದಾರೆ. ಇದನ್ನು ವಿರೋಧಿಸಿ ಬಿಜೆಪಿ ನವೆಂಬರ್ 4ರಂದು ಎಲ್ಲಾ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆಗೆ ಕರೆ ನೀಡಿದೆ.

ಪ್ರತಿ ಹಳ್ಳಿಯಲ್ಲಿರುವ ಬಿಜೆಪಿ ಬೂತ್ ಅಧ್ಯಕ್ಷರು ದಾಖಲೆ ಪರಿಶೀಲಿಸುವಂತೆ ಬಿಜೆಪಿ ಸ್ಥಳೀಯ ನಾಯಕರಿಗೆ ಸೂಚಿಸಿದೆ. ಯಾರಿಗೆ ಅನ್ಯಾಯವಾಗಿದೆಯೋ ಅವರನ್ನು ಗುರುತಿಸಿ ಕಾನೂನು ಹೋರಾಟ ನಡೆಸುವ ಬಗ್ಗೆ ರೂಪುರೇಷೆ ಸಿದ್ಧಪಡಿಸಿದೆ. ರೈತರ ಪಹಣಿಯಲ್ಲಿನ ಹೆಸರು ಬದಲಾದರೆ ತಕ್ಷಣ ಗಮನಕ್ಕೆ ತರುವಂತೆ ಬಿಜೆಪಿ ವರಿಷ್ಠರು ಬೂತ್ ಅಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ.

ಶುಕ್ರವಾರ ಶಿರಸಿಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಯಲ್ಲಾಪುರದಲ್ಲಿ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಏಕಕಾಲಕ್ಕೆ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ನಿಲುವು ಖಂಡಿಸಿದರು. `ರಾಜ್ಯದ ಮೂಲೆ ಮೂಲೆಯಲ್ಲಿ ವಕ್ಟ್ ಬೋರ್ಡ ಆಸ್ತಿ ವಿವಾದ ಉಂಟಾಗಿದೆ. ಸಾವಿರಾರು ರೈತರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ತಂದು ಪಹಣಿ ಪತ್ರಿಕೆಯಲ್ಲಿ ವಕ್ಟ ಬೋರ್ಡಿನ ಹೆಸರು ನಮೂದಿಸುತ್ತಿದ್ದಾರೆ’ ಎಂದು ನಾಯಕರು ದೂರಿದರು.

`ಹಿಂದೂ ಸ್ಮಶಾನ ಭೂಮಿ ದಾಖಲೆಗಳು ಸಹ ತಿದ್ದುಪಡಿಯಾಗಿದೆ. ಹಿಂದೂ ಸ್ಮಶಾನದ ಕಾಗದ ಪತ್ರಗಳನ್ನು ಸಹ ವಕ್ಟ್ ಹೆಸರಿಗೆ ಬರೆಯಲಾಗಿದೆ. ಸರ್ಕಾರದ ಬಳಿ ಹಣ ಇಲ್ಲದೇ ಇದ್ದರೂ ವಕ್ಟ್ ಬೋರ್ಡಿನ ಆಸ್ತಿಗಳಿಗೆ ಕಪೌಂಡ್ ನಿರ್ಮಿಸಲು ಸರ್ಕಾರ 100 ಕೋಟಿ ರೂ ಅನುದಾನ ನೀಡಿದೆ’ ಎಂದು ಆರೋಪಿಸಿದರು.

`ನವೆಂಬರ್ 4ರಂದು ಜಿಲ್ಲಾ ಕೇಂದ್ರ ಕಾರವಾರ ಸೇರಿ ಪ್ರತಿ ತಾಲೂಕಿನಲ್ಲಿಯೂ ರೈತರ ಬೆಂಬಲದೊAದಿಗೆ ಪ್ರತಿಭಟನೆ ನಡೆಯಲಿದೆ. ರೈತರ ಭೂಮಿಯನ್ನು ಸರ್ಕಾರ ರೈತರಿಗೆ ಮರಳಿಸುವವರೆಗೂ ಹೋರಾಟ ಮುಂದುವರೆಯಲಿದೆ’ ಎಂದು ಹೇಳಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page