6

ಕಡಲಿನಲ್ಲಿ ಮೋಜು-ಮಸ್ತಿ: ವಿದೇಶಿ ಮಹಿಳೆ ಜೊತೆ ಸ್ವದೇಶಿ ಮೂವರ ರಕ್ಷಣೆ!

ಕುಮಟಾ: ಗೋಕರ್ಣದ ಕುಡ್ಲೆ ಕಡಲತೀರದ ಅಬ್ಬರಕ್ಕೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ನಾಲ್ವರನ್ನು ಶುಕ್ರವಾರ ಸಂಜೆ ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ.

ಬೆಂಗಳೂರಿನ ಎಬಿನ್ ಡೇವಿಶ (35), ಮಧುರಾ ಅಗ್ರವಾಲ್(35) ಹಾಗೂ ರಮ್ಯಾ ವೆಂಕಟ್ರಮಣ (34) ಕಡಲ ತೀರದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಅವರನ್ನು ನೋಡಿದ ರಷ್ಯಾದ ಮಹಿಳೆ ಜೈನ್ (41) ಸಹ ನೀರಿಗೆ ಇಳಿದಿದ್ದರು. ಎಲ್ಲರೂ ಒಟ್ಟಿಗೆ ಆಟವಾಡುತ್ತಿದ್ದಾಗ ಅಲೆಗಳ ಅಬ್ಬರ ಜೋರಾಗಿದ್ದು, ಸುಳಿಗೆ ಸಿಲುಕಿ ಅಪಾಯದ ಅಂಚು ತಲುಪಿದ್ದರು.

ಇದನ್ನು ಗಮನಿಸಿದ ಜೀವಕ್ಷಕ ಸಿಬ್ಬಂದಿ ನಾಗೇಂದ್ರ ಕುರ್ಲೆ, ಮಂಜುನಾಥ ಹರಿಕಂತ್ರ, ಪ್ರವಾಸಿಮಿತ್ರ ಶೇಖರ ಹರಿಕಂತ್ರ ತಕ್ಷಣ ಅಲ್ಲಿಗೆ ತೆರಳಿ ಅವರನ್ನು ಬದುಕಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page