6

ಗಡಿನಾಡಿನಲ್ಲಿ ಕನ್ನಡ ಕಲರವ: ಭಾಷೆಯ ಉಳಿವಿಕೆಗೆ ನಿರಂತರ ಹೋರಾಟ

`ಕರ್ನಾಟಕದಲ್ಲಿ ಕನ್ನಡವೇ ಪ್ರಥಮ ಭಾಷೆಯಾಗಿದ್ದು, ಗಡಿನಾಡು ಕಾರವಾರದಲ್ಲಿನ ಎಲ್ಲಾ ನಾಮ ಫಲಕಗಳಲ್ಲಿಯೂ ಕನ್ನಡ ಕಡ್ಡಾಯವಾಗಿರಬೇಕು. ಕಾರವಾರ ನಗರಸಭೆ ವ್ಯಾಪ್ತಿಯಲ್ಲಿನ ಎಲ್ಲಾ ಮಳಿಗೆಗಳಲ್ಲಿಯೂ ಕನ್ನಡ ಬರಹಗಳು ಕಾಣಿಸಬೇಕು’ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್ ಅವರು ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ್ ಅವರನ್ನು ಒತ್ತಾಯಿಸಿದ್ದಾರೆ. ಸರ್ಕಾರಿ ಆದೇಶದ ಪ್ರಕಾರ ಎಲ್ಲಾ ನಾಮಫಲಕಗಳಲ್ಲಿಯೂ ಕನ್ನಡ ಭಾಷೆಗೆ ಆದ್ಯತೆ ನೀಡುವಂತೆ ಅಂಗಡಿಕಾರರಿಗೆ ಸೂಚಿಸುವುದಾಗಿ ರವಿರಾಜ ಅಂಕೋಲೇಕರ್ ಭರವಸೆ ನೀಡಿದರು.

ಕಾರವಾರ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಶುಕ್ರವಾರ ಕಾರವಾರ ಬಸ್ ನಿಲ್ದಾಣದ ಎದುರು ಜಯ ಕರ್ನಾಟಕ ಜನಪರ ವೇದಿಕೆಯವರು ಕನ್ನಡ ಧ್ವಜ ಹಾರಿಸಿದರು. ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ್ ಧ್ವಜಾರೋಹಣ ನೆರವೇರಿಸಿ, ಕನ್ನಡ ಸಂಘಟನೆಯವರ ಬೇಡಿಕೆ ಆಲಿಸಿ ಭರವಸೆ ನೀಡಿದರು.

ನಂತರ ಮಾತನಾಡಿದ ಅವರು `ಕನ್ನಡ ಭಾಷೆಯ ಉಳಿವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಪ್ರಯತ್ನಿಸೋಣ’ ಎಂದು ಹೇಳಿದರು. ಸಂಘಟನೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್ ಮಾತನಾಡಿ `ಕನ್ನಡ ನಮ್ಮ ಸಂಘಟನೆ ಸಾಕಷ್ಟು ಶ್ರಮಿಸುತ್ತಿದೆ. ನೆಲ, ಜಲ, ನುಡಿ ರಕ್ಷಣೆಗೆ ನಾವು ಸದಾ ಬದ್ಧ’ ಎಂದರು. ಪ್ರಮುಖರಾದ ಸುಭಾಷ್ ಗುನಗಿ ಸಂಘಟನೆಯ ಹೋರಾಟದ ಬಗ್ಗೆ ಮಾಹಿತಿ ನೀಡಿದರು.

ನಗರಸಭೆ ಸದಸ್ಯ ಹನುಮಂತ ತಳವಾರ್, ಪ್ರಮುಖರಾದ ರೋಷನ್ ಹರಿಕಂತ್ರ, ಸುದೇಶ್ ನಾಯ್ಕ್, ಸುನಿಲ್ ತಾಂಡೇಲ್, ರಾಹುಲ್ ತಾಂಡೇಲ್, ಮೋಹನ್ ಉಳ್ವೇಕರ್, ರೋಷನ್ ತಾಂಡೇಲ್, ಸಂದೇಶ್ ಆಚಾರಿ, ಪ್ರವೀಣ್ ತಾಂಡೇಲ್, ಮಿಥುನ್ ತಾಂಡೇಲ್, ರಾಜು ತಾಂಡೇಲ್, ನಾಗರಾಜ್ ಉಳೇಕರ್, ಗಣರಾಜ್ಯ ಠಾಕೇಕರ್, ವಿನಯ ನಾಯ್ಕ್, ದಿಲೀಪ್ ಉಳ್ಳೇಕರ್ ಇತರರು ಇದ್ದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page