6

ರೆಸಾರ್ಟ | ಮಾಲಕನಿಗೆ ಹೃದಯಘಾತ.. ಕಾರ್ಮಿಕ ಆತ್ಮಹತ್ಯೆ!

ಕುಮಟಾ: ಗೋಕರ್ಣದ ದುಬ್ಬಿನಸಶಿಯಲ್ಲಿ ರೆಸಾರ್ಟ ನಡೆಸುತ್ತಿದ್ದ ಗೌರೀಶ ಗೋಪಾಳ ನಾಯಕ (61) ಕಾರು ಚಲಾಯಿಸುತ್ತಿರುವಾಗ ಹೃದಯಘಾತವಾಗಿ ಸಾವನಪ್ಪಿದ್ದಾರೆ. ದುಬ್ಬಿನಸಶಿಯ `ದಿ ಸ್ಪೇಸ್ ಕಫೆ’ಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಪಾಪು ತಾಫಾ (20) ಎಂಬಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವೆರಡೂ ಕೆಲವೇ ಗಂಟೆ ಅವಧಿಯಲ್ಲಿ ನಡೆದ ರೆಸಾರ್ಟಿಗೆ ಸಂಬoಧಿಸಿದ ಬೇರೆ ಬೇರೆ ಸುದ್ದಿಗಳು!

ಬಾವಿಕೊಡ್ಲ ಬಳಿಯ ದುಬ್ಬಿನಸಶಿಯಲ್ಲಿ ಗೌರೀಶ ನಾಯಕ ಅವರು ತಮ್ಮ ಪತ್ನಿ ಭಾನು ಎಂಬಾತರ ಜೊತೆ ವಾಸವಾಗಿದ್ದರು. ಅವರು ಅಲ್ಲಿಯೇ ರೆಸಾರ್ಟ ಉದ್ಯಮವನ್ನು ನಡೆಸುತ್ತಿದ್ದರು. ಕಳೆದ ಒಂದು ವರ್ಷದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ನ 1ರಂದು ಅವರು ಗೋಕರ್ಣಕ್ಕೆ ಬಂದಿದ್ದು, ಕಾರಿನಲ್ಲಿ ದುಬ್ಬಿನಸಶಿ ಕಡೆ ಮರಳುವಾಗ ಅಸ್ವಸ್ಥರಾದರು. ಅವರೇ ಕಾರು ಓಡಿಸುತ್ತಿದ್ದು, ಅಲ್ಲಿಯೇ ಹೃದಯಘಾತದಿಂದ ಸಾವನಪ್ಪಿದರು. ಸಾವಿಗೂ ಮುನ್ನ ಅವರು ಕಾರನ್ನು ರಸ್ತೆಯಲ್ಲಿ ನಿಲ್ಲಿಸಿದ್ದರು. ಎಷ್ಟು ಹೊತ್ತಾದರೂ ಕಾರು ಅಲ್ಲಿಯೇ ನಿಂತಿರುವ ಬಗ್ಗೆ ಹೋಗಿ ಪರಿಶೀಲಿಸಿದಾಗ ಗೌರೀಶ ನಾಯಕ ಅವರು ಮೌನವಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ತಂದರೂ ವೈದ್ಯರು ಅವರು ಸಾವನಪ್ಪಿರುವುದನ್ನು ಖಚಿತಪಡಿಸಿದರು.

ಅಡುಗೆ ಸಿಬ್ಬಂದಿ ಆತ್ಮಹತ್ಯೆ
ದುಬ್ಬನಸಶಿಯಲ್ಲಿನ ಯ `ದಿ ಸ್ಪೇಸ್ ಕಫೆ’ಯಲ್ಲಿ ಅಡುಗೆ ಹಾಗೂ ಊಟ ಪೂರೈಕೆ ಕೆಲಸ ಮಾಡುತ್ತಿದ್ದ ಬಂಗಾಳದ ಪಾಪು ತಾಫಾ (20)ಅದೇ ಕಫೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಅವರ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ನ 2ರ ಬೆಳಗ್ಗೆ 5 ಗಂಟೆಗೆ ಪಾಪು ತಾಫಾ ಆತ್ಮಹತ್ಯೆಗೆ ಶರಣಾಗಿರುವ ಶಂಕೆಯಿದ್ದು, ಸಂಜೆ 6.30ಕ್ಕೆ ಇತರೆ ಕೆಲಸಗಾರರು ಕಫೆಗೆ ಬಂದಾಗ ಆತ ಸಾವನಪ್ಪಿರುವುದು ಗೊತ್ತಾಗಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page