6

ಚರ್ಚಿನ ಒಳಗೆ ಪೊಲೀಸರ ಪ್ರಾರ್ಥನೆ!

ಹೊನ್ನಾವರ: ಜನ ಸೇರುವ ಕಡೆ ಪೊಲೀಸರು ಭದ್ರತೆಗೆ ಹೋಗುವುದು ಮಾಮೂಲಿ. ಆದರೆ, ಉತ್ತರ ಕನ್ನಡ ಜಿಲ್ಲಾ ಪೊಲೀಸರು ಜನ ಸೇರುವ ಪ್ರದೇಶಗಳಿಗೆ ಸ್ವಯಂ ಪ್ರೇರಣೆಯಿಂದ ತೆರಳಿ ಜನ ಜಾಗೃತಿಯ ಕೆಲಸ ಮಾಡುತ್ತಿದ್ದಾರೆ.

ಭಾನುವಾರ ಹೊನ್ನಾವರದ ಕಾಸರಕೋಡಿನ ಸೆಂಟ್ ಜೋಸೆಫ್ ಚರ್ಚ’ಗೆ ತೆರಳಿದ ಪೊಲೀಸರು ಅಲ್ಲಿ ನೆರೆದಿದ್ದವರಿಗೆ ಕಾನೂನು ತಿಳುವಳಿಕೆ ಮೂಡಿಸಿದರು. ಅಲ್ಲಿ ನೆರೆದಿದ್ದವರೆಲ್ಲರೂ ಏಸುವನ್ನು ಬೇಡಿಕೊಂಡರೆ ಪೊಲೀಸರು `ಕಾನೂನು-ಸುವ್ಯವಸ್ಥೆ ಕಾಪಾಡಲು ಕೈ ಜೋಡಿಸಿ’ ಎಂದು ಸಾರ್ವಜನಿಕರನ್ನು ಪ್ರಾರ್ಥಿಸಿದರು.

ಪಿ ಎಸ್ ಐ ಮಂಜುನಾಥ ಹಾಗೂ ಸಿಬ್ಬಂದಿ ಅಲ್ಲಿ ತೆರಳಿ ಅಪರಾಧ ತಡೆಗೆ ಜನ ಸಾಮಾನ್ಯರು ಮಾಡಬೇಕಾದ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಸಂಚಾರಿ ನಿಯಮ ಪಾಲನೆ, ಸೈಬರ್ ಅಪರಾಧ ತಡೆ ಕುರಿತು ಅವರು ನೆರೆದಿದ್ದವರಿಗೆ ಮನವರಿಕೆ ಮಾಡಿದರು.

ಭಗವಂತನಲ್ಲಿ ಬೇಡಿಕೊಳ್ಳಲು ಚರ್ಚ’ಗೆ ಬಂದವರ ಬಳಿ ಪೊಲೀಸರು ಕಾನೂನು ಪಾಲಿಸುವಂತೆ ಪ್ರಾರ್ಥಿಸಿದರು. ಕಾನೂನು ಪಾಲಿಸದೇ ಇದ್ದರೆ ಆಗಬಹುದಾದ ಅವಘಡ ಹಾಗೂ ಶಿಕ್ಷೆಗಳ ಬಗ್ಗೆಯೂ ಅರಿವು ಮೂಡಿಸಿದರು.

ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರ ಸೂಚನೆ ಮೇರೆಗೆ ಜಿಲ್ಲೆಯ ಎಲ್ಲಾ ಕಡೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಚುರುಕಿನಿಂದ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನ ಜಾಗೃತಿ, ಶಾಲಾ-ಕಾಲೇಜಿನ ವಿದ್ಯಾರ್ಥಿಗಳಲ್ಲಿ ಅರಿವು, ಧಾರ್ಮಿಕ ಕೇಂದ್ರಗಳಲ್ಲಿ ಮಾಹಿತಿ ಸೇರಿ ಹಲವು ಬಗೆಯಲ್ಲಿ ಪೊಲೀಸರು ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ.

  • Related Posts

    ಹಾವೇರಿ ಮಹಿಳಾ ಕಾಂಗ್ರೆಸ್‌ನಿಂದ ಇಂದಿರಾ ಗಾಂಧಿ ಜನ್ಮದಿನಾಚರಣೆ!

    Share this… Facebook Pinterest Twitter Linkedin Whatsappಹಾವೇರಿಯಲ್ಲಿ ಇಂದಿರಾ ಗಾಂಧಿ ಜನ್ಮದಿನಾಚರಣೆ: ಮಾಜಿ ಪ್ರಧಾನಿಯ ಕೊಡುಗೆ ಸ್ಮರಿಸಿದ ಮಹಿಳಾ ಕಾಂಗ್ರೆಸ್ ಮುಖಂಡರು ಹಾವೇರಿ: ಭಾರತದ ಮಾಜಿ ಪ್ರಧಾನಮಂತ್ರಿ ಹಾಗೂ ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿದ್ದ ದಿವಂಗತ ಇಂದಿರಾ ಗಾಂಧಿಯವರ ಜನ್ಮದಿನದ…

    ನ.23 ರಂದು ಒಂದು ದಿನದ ರಫ್ತು ಪ್ರೋತ್ಸಾಹಧನ

    Share this… Facebook Pinterest Twitter Linkedin Whatsappಜವಳಿ ವಲಯದ ಸಂಭಾವ್ಯ ರಫ್ತು ಉದ್ದಿಮೆದಾರರಿಗೆ ಒಂದು ದಿನದ ರಫ್ತು ಪ್ರೊತ್ಸಾಹನ ಕಾರ್ಯಗಾರ ನ.23 ರಂದು ಸೋಮುವಾರ ಬೆಳಗ್ಗೆ 10 ಗಂಟೆಗೆ ಹಾವೇರಿ ನಗರದ “ಗುಡ್ಡೆಪ್ಪ ಹಳ್ಳಿಕೇರಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಜವಳಿ…

    You cannot copy content of this page