6

ಅಪಘಾತದಿಂದ ಬೆಳಕಿಗೆ ಬಂದ ಅಕ್ರಮ!

ಅಂಕೋಲಾ: ದೀಪಾವಳಿ ಹಬ್ಬದ ವೇಳೆ ಬಾಳೆಗುಳಿ ಬಳಿ ಲಾರಿ ಅಪಘಾತವಾದ ಪರಿಣಾಮ ಭಾರೀ ಪ್ರಮಾಣದಲ್ಲಿ ನಡೆಯುತ್ತಿದ್ದ ಅಕ್ರಮ ಜಾನುವಾರು ಸಾಗಾಟ ಬೆಳಕಿಗೆ ಬಂದಿದೆ.

ಅಪಘಾತವಾದ ವಾಹನದಲ್ಲಿದ್ದ ಎರಡು ಎತ್ತು, 4 ಕೋಣ ಹಾಗೂ 9 ಎಮ್ಮೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಅಪಘಾತದಲ್ಲಿ ಮೂರು ಜಾನುವಾರುಗಳಿಗೂ ಗಾಯವಾಗಿದೆ. ಅಪಘಾತ ನಡೆದ ಕೂಡಲೇ ವಾಹನ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ಎಲ್ಲಾ ಜಾನುವಾರುಗಳಿಗೆ ಮೇವು ಒದಗಿಸಿ ನೆರಳಿನಲ್ಲಿ ಆಶ್ರಯ ನೀಡಿದ್ದಾರೆ.

ಕೆಟ್ಟು ನಿಂತ ಲಾರಿಗೆ ಹಿಂಬ0ದಿಯಿoದ ಬಂದ ಅಕ್ರಮ ಜಾನುವಾರು ಸಾಗಾಟದ ವಾಹನ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಎರಡೂ ವಾಹನ ಜಖಂ ಆಗಿದ್ದು, ಲಾರಿ ಚಾಲಕನ ಬಗ್ಗೆಯೂ ಸುಳಿವು ಸಿಕ್ಕಿಲ್ಲ. ಲಾರಿ ವಶಕ್ಕೆ ಪಡೆದ ಪೊಲೀಸರು ಜಾನುವಾರುಗಳನ್ನು ಎಲ್ಲಿಂದ ಸಾಗಿಸಲಾಗುತ್ತಿತ್ತು? ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಹುಡುಕುತ್ತಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page