6

ಬೈಕ್ ಓಡಿಸಿದ್ದು ಬಾಲಕ.. ದಂಡ ಪಾವತಿಸಿದ್ದು ಪಾಲಕ!

ಜೊಯಿಡಾ: ಬಾಲಕನಿಗೆ ಬೈಕ್ ಓಡಿಸಲು ನೀಡಿದ್ದ ಪಾಲಕನಿಗೆ ನ್ಯಾಯಾಲಯ 25 ಸಾವಿರ ರೂ ದಂಡ ವಿಧಿಸಿದೆ.

20 ದಿನದ ಹಿಂದೆ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತನೊಬ್ಬ ಬೈಕ್ ಓಡಿಸುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಪಿ ಎಸ್ ಐ ಬಸವರಾಜ್ ಮಬಕನೂರು ಬಾಲಕನನ್ನು ನಿಲ್ಲಿಸಿ ಬೈಕ್ ಓಡಿಸಲು ಪರವಾನಿಗೆ ಇದೆಯೇ? ಎಂದು ಪ್ರಶ್ನಿಸಿದ್ದರು. ಸಿಕ್ಕಿ ಬಿದ್ದವ 17 ವರ್ಷದವನಾಗಿದ್ದರಿಂದ ಆತನ ಬಳಿ ಲೈಸನ್ಸ ಇರಲಿಲ್ಲ. ಹೀಗಾಗಿ ಆ ಬೈಕ್ ನೊಂದಣಿ ಆಧಾರದ ಮೇಲೆ ಬೈಕಿನ ಮಾಲಕ ದಿಲೀಪ ದಶರಥ ದೇಸಾಯಿ ಎಂಬಾತರಿಗೆ ಪೊಲೀಸರು ನೋಟಿಸ್ ನೀಡಿದರು. ಜೊತೆಗೆ ಬಾಲಕನಿಗೆ ಬೈಕ್ ನೀಡಿದ ಕಾರಣ ಬೈಕ್ ಮಾಲಕನ ವಿರುದ್ಧ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ದಾಂಡೇಲಿಯ ಜೆ ಎಂ ಎಫ್ ಸಿ ನ್ಯಾಯಾಧೀಶರು ದಿಲೀಪ ದಶರಥ ದೇಸಾಯಿ ಅವರನ್ನು ಕರೆಯಿಸಿ ಬುದ್ದಿ ಹೇಳಿದರು. ಮಕ್ಕಳ ಕೈಗೆ ವಾಹನ ನೀಡುವುದರಿಂದ ಆಗುವ ಅಪಘಾತಗಳ ಬಗ್ಗೆ ಅವರು ಮನವರಿಕೆ ಮಾಡಿದರು. ನಂತರ ಮಾಡಿದ ತಪ್ಪಿಗೆ 25 ಸಾವಿರ ರೂ ದಂಡ ಪಾವತಿಸುವಂತೆ ಸೂಚಿಸಿದ್ದು, ದಿಲೀಪ್ ದೇಸಾಯಿ ಸೋಮವಾರ ಅದನ್ನು ಪಾವತಿಸಿ ರಸೀದಿ ಪಡೆದರು.

`ಮಕ್ಕಳ ಕೈಗೆ ಬೈಕ್ ನೀಡಿ ಅನಾಹುತ ಮಾಡಿಕೊಳ್ಳದಿರಿ’

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page