6

ಆಸೆ ಪಟ್ಟಿದ್ದು ಹಂದಿ ಮಾಂಸ.. ಸಿಕ್ಕಿದ್ದು ಜೈಲು ಊಟ!

ಶಿರಸಿ: ಮಾಂಸಕ್ಕಾಗಿ ಕಾಡು ಹಂದಿ ಕೊಂದ ಪರಶುರಾಮ ಕಾಳೇನವರ್ ಎಂಬಾತರನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಶಿರಸಿ ಮುಗವಳ್ಳಿಯ ಪರಶುರಾಮ ಮಂಗಳವಾರ ರಾತ್ರಿ ಶಿಖಾರಿಗೆ ಹೋಗಿದ್ದ. ಅಲ್ಲಿ ಆತನಿಗೆ ಕಾಡು ಹಂದಿ ಸಿಕ್ಕಿದ್ದು, ಮಾಂಸದ ಆಸೆಗೆ ಆ ಪ್ರಾಣಿಯನ್ನು ಬೇಟೆ ಆಡಿದ್ದ. ಹಂದಿಯ ಮಾಂಸದ ಜೊತೆ ಮನೆಗೆ ಬಂದಿದ್ದ ಆತನ ಮೇಲೆ ಅರಣ್ಯ ಸಿಬ್ಬಂದಿ ದಾಳಿ ನಡೆಸಿದರು. ಆಗ. 25 ಕೆಜಿ ಮಾಂಸದ ಜೊತೆ ಪರಶುರಾಮ ಕಾಳೇನವರ್ ಸಿಕ್ಕಿ ಬಿದ್ದಿದ್ದಾನೆ.

ಬನವಾಸಿ ವಲಯ ಅರಣ್ಯಾಧಿಕಾರಿ ಭವ್ಯ ನಾಯ್ಕ, ಅರಣ್ಯ ಸಿಬ್ಬಂದಿ ಮಂಜುನಾಥ ಗಂಗೆಮತ, ಯಶೋದಾ ನಾಯ್ಕ ,ಮಹೇಶ ಅಜ್ಮೀರ, ಅರಣ್ಯ ಪಾಲಕ ಬಸನಗೌಡ ಹಲಗಿ, ಖಾದರ ಸಾಬ್,ಪರಶುರಾಮ, ಮಂಜುನಾಥ ನಾಯ್ಕ ಕಾರ್ಯಾಚರಣೆಯಲ್ಲಿದ್ದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page