6

ಬಾಡಿಗೆಯೂ ಇಲ್ಲ.. ತೆರಿಗೆಯೂ ಇಲ್ಲ: ಖಾಸಗಿ ಸಂಸ್ಥೆಗೆ ಪುಕ್ಕಟ್ಟೆ ಜಾಗ!

ಅಂಕೋಲಾ: ಅರಣ್ಯ ಇಲಾಖೆಯಿಂದ 99 ಅವಧಿಗೆ ಪುರಸಭೆ ಲೀಸ್ ಆಧಾರದಲ್ಲಿ ಪಡೆದ ಜಾಗ ಅನ್ಯರ ಪಾಲಾಗಿದೆ. ಕಾನೂನುಬಾಹಿರವಾಗಿ ಖಾಸಗಿ ಸಂಸ್ಥೆ ಇಲ್ಲಿ ಅಕ್ರಮ ಕಟ್ಟಡ ನಿರ್ಮಿಸಿದೆ.

ಈ ಭೂಮಿಗೆ ಸಂಬoಧಿಸಿ ಖಾಸಗಿ ಸಂಸ್ಥೆ ಪುರಸಭೆಗೂ ಬಾಡಿಗೆ ಪಾವತಿಸಿಲ್ಲ. ಅರಣ್ಯ ಇಲಾಖೆಗೂ ಸಂಸ್ಥೆ ಮೇಲೆ ಹಿಡಿತವಿಲ್ಲ. ಪುರಸಭೆ ಲೀಸ್ ಆಧಾರದಲ್ಲಿ ಪಡೆದ ಭೂಮಿಯಲ್ಲಿ ಬೇರೆ ಸಂಸ್ಥೆ ಕಟ್ಟಡ ನಿರ್ಮಿಸಲು ಸಹ ಕಾನೂನಿನಲ್ಲಿ ಅವಕಾಶವಿಲ್ಲ. ಬೋಗ್ರಿಬೈಲ್’ನಲ್ಲಿ ಒಣ ತ್ಯಾಜ್ಯ ಘಟಕ ಸ್ಥಾಪನೆಗೆ ಪುರಸಭೆ ಆಸಕ್ತಿವಹಿಸಿದಾಗ ಇಂಥಹೊ0ದು ಅಕ್ರಮ ಬೆಳಕಿಗೆ ಬಂದಿದೆ. ಖಾಸಗಿ ಸಂಸ್ಥೆ ಒಂದು ಎಕರೆ ಪ್ರದೇಶ ಕಬಳಿಸಿ, ದಶಕದ ಹಿಂದೆಯೇ ಇಲ್ಲಿ ಕಟ್ಟಡ ನಿರ್ಮಿಸಿದರೂ ಆ ಬಗ್ಗೆ ಯಾರೂ ಪ್ರಶ್ನಿಸಿಲ್ಲ.

ಬೋಗ್ರಿಬೈಲ್ ಬಳಿ ಸ.ನಂ 79 ಅ 1ರ ಅರಣ್ಯ ಇಲಾಖೆಯ 5 ಎಕರೆ ಜಾಗವನ್ನು ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಸ್ಥಳೀಯ ಆಡಳಿತ ಮನವಿ ಮಾಡಿದ್ದು, 2005ರಲ್ಲಿ ಅರಣ್ಯ ಇಲಾಖೆ 19,98,983 ರೂ ಪಾವತಿಸಿಕೊಂಡು 99 ವರ್ಷದ ಅವಧಿಗೆ ಲೀಸ್ ನೀಡಿತ್ತು. ಸಾರ್ವಜನಿಕ ತೆರಿಗೆ ಹಣವನ್ನು ಬಳಸಿ ಪುರಸಭೆ ಅರಣ್ಯ ಇಲಾಖೆಗೆ ಹಣ ಪಾವತಿಸಿದ್ದು, ಹೀಗೆ ಪಾವತಿಸಿದ ಹಣದಲ್ಲಿನ ಭೂಮಿ ಅನ್ಯರ ಪಾಲಾಗಿದೆ.

2011ರಲ್ಲಿ ಜೀವ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಖಾಸಗಿ ಸಂಸ್ಥೆ ಅಂಕೋಲಾ ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿಕೊಂಡಿತ್ತು. 2012 ರಲ್ಲಿ ಪಟ್ಟಣ ಪಂಚಾಯಿತಿಯ ಅಂದಿನ ಮುಖ್ಯಾಧಿಕಾರಿ ಅರುಣ ನಾಯ್ಕ ಖಾಸಗಿ ಸಂಸ್ಥೆಯೊoದಕ್ಕೆ 1 ಎಕರೆ ಜಾಗವನ್ನು ನೀಡುವ ಒಪ್ಪಂದ ಮಾಡಿಕೊಂಡಿದ್ದರು. `ಈ ಬಗೆಯ ಒಪ್ಪಂದಕ್ಕೆ ಮಾನ್ಯತೆ ಇಲ್ಲ’ ಎಂದು ಜನಪ್ರತಿನಿಧಿಗಳು ಹೇಳಿದ್ದರು. ಲೀಸ್’ಗೆ ಪಡೆದ ಜಾಗವನ್ನು ಯಾವುದೇ ಸಂಸ್ಥೆಗೆ ನೀಡದಂತೆ ಠರಾವು ಮಾಡಿಸಿದ್ದರು. ಆದರೂ, ಪ್ರಯೋಜನವಾಗಿರಲಿಲ್ಲ.

ಅಂದಿನಿ0ದ ಇಂದಿನವರೆಗೂ ಯಾವುದೇ ಬಾಡಿಗೆ-ದಾಖಲೆ ಇಲ್ಲದೇ 1 ಎಕರೆ ಜಾಗವನ್ನು ಸಂಸ್ಥೆ ಬಳಸುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಜನ ಆಗ್ರಹಿಸಿದ್ದಾರೆ.

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page