6

ಪುಣ್ಯಕೋಟಿಗೆ ಮರುಜೀವ: ರವೀಂದ್ರ ನಗರ ಹುಡುಗರಿಂದ ಪುಣ್ಯಕಾರ್ಯ!

ಯಲ್ಲಾಪುರ: ಕುಡಿಯುವ ನೀರಿನ ಕಾಮಗಾರಿ ಅವ್ಯವಸ್ಥೆಯಿಂದ ಹೊಂಡಕ್ಕೆ ಬಿದ್ದ ಹಸುವನ್ನು ರವೀಂದ್ರ ನಗರದ ಹುಡುಗರು ಮೇಲೆತ್ತಿದ್ದಾರೆ.

ಗುರುವಾರ ಬೆಳಗ್ಗೆ YTSS ಹಿಂದಿನ ನೀರಿನ ಟಾಕಿ ಬಳಿ ತೆರಳಿದ ಹಸು ಅಲ್ಲಿನ ಹೊಂಡಕ್ಕೆ ಬಿದ್ದಿದ್ದು, ಆಕಳು ಕೂಗುವುದನ್ನು ಕೇಳಿದ ಶಹನಾಜ್ ಎಂಬಾತರು ಪ ಪಂ ಸದಸ್ಯ ಸೋಮು ನಾಯ್ಕ ಅವರಿಗೆ ಮಾಹಿತಿ ನೀಡಿದರು. ತಕ್ಷಣ ತಮ್ಮ ತಂಡದೊOದಿಗೆ ಬಂದ ಸೋಮು ನಾಯ್ಕ ಪ ಪಂ ಸಿಬ್ಬಂದಿ ಸಹಕಾರದಲ್ಲಿ ಆ ಹಸುವನ್ನು ಮೇಲೆತ್ತಿದರು. ನಂತರ ಮೇವು ನೀರು ನೀಡಿ ಉಪಚರಿಸಿದರು.

ದಶಕದ ಹಿಂದೆ ಪಟ್ಟಣ ಪಂಚಾಯತ ಕುಡಿಯುವ ನೀರಿನ ಕಾಮಗಾರಿಗಾಗಿ ಇಲ್ಲಿ ಹೊಂಡ ನಿರ್ಮಿಸಿದೆ. ಆ ಹೊಂಡಕ್ಕೆ ಸರಿಯಾಗಿ ಮುಚ್ಚಲ ನಿರ್ಮಿಸಿಲ್ಲ. ಅತ್ಯಂತ ಇಕ್ಕಟ್ಟಾದ 4 ಅಡಿ ಆಳದ ಹೊಂಡಲ್ಲಿ ಹಸು ಬಿದ್ದಿದ್ದು, ಆ ಹಸು ಮೇಲೆ ಬರಲಾಗದೇ ನರಳುತ್ತಿತ್ತು. ಇದನ್ನು ನೋಡಿದ ಗೋ ಪ್ರೇಮಿಗಳು ಹಗ್ಗದ ಸಹಾಯದಿಂದ ಹಸುವನ್ನು ಮೇಲೆತ್ತಿದರು.

ಸುಜಯ ಮರಾಠಿ, ಕಾರ್ತಿಕ ನಾಯ್ಕ, ನಾಗರಾಜ ಯಲ್ಲಾಪುರಕರ, ಚಂದ್ರು ಗೌಡರ್, ರವಿ ಬೋವಿ, ಕಾರ್ತಿಕ ಬೋವಿ, ರೋಹಿತ್, ಅಮಿತ್, ಕಿರಣ
ಅಜೀತ್ ಸೇರಿ ಆಕಳ ಜೀವ ಉಳಿಸಿದರು. `ಪಟ್ಟಣ ಪಂಚಾಯತ ಅವ್ಯವಸ್ಥೆಯಿಂದ ಮೂಕಜೀವಿಗಳು ಸಮಸ್ಯೆ ಅನುಭವಿಸುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು’ ಎಂದು ನೆರೆದಿದ್ದವರು ಆಗ್ರಹಿಸಿದರು.

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page