6

ಇಲಿ ಪಾಷಣ ತಿಂದವ ಮೂರು ದಿನ ಬದುಕಿದ!

ಅಂಕೋಲಾ: ಕೊಡ್ಲಗದ್ದೆಯ ಸತೀಶ್ ಪಟಗಾರ (45) ಇಲಿಮದ್ದು ಸೇವಿಸಿದ ಪರಿಣಾಮ ಮೂರು ದಿನ ನರಕಯಾತನೆ ಅನುಭವಿಸಿದ್ದು, ನಂತರ ಸಾವನಪ್ಪಿದ್ದಾರೆ. ಸತೀಶ್ ಪಟಗಾರ ಅವರ ಪತ್ನಿ ಶೋಭಾ (38) ಸಹ ಇಲಿ ಮದ್ದು ಸೇವಿಸಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ.

ಅoಕೋಲಾ ಕೊಡ್ಲಗದ್ದೆಯ ಸತೀಶ ಮಾರು ಪಟಗಾರ (45) ಕೂಲಿ ಕೆಲಸ ಮಾಡಿ ಬದುಕುತ್ತಿದ್ದರು. ಇಬ್ಬರು ಮಕ್ಕಳನ್ನು ಹೊಂದಿದ ಅವರು ವಿಪರೀತ ಮದ್ಯ ಸೇವನೆ ಮಾಡುತ್ತಿದ್ದರು. ನಿತ್ಯ ದುಡಿದ ಹಣವನ್ನೆಲ್ಲ ಸರಾಯಿ ಅಂಗಡಿಗೆ ವ್ಯಯಿಸುತ್ತಿದ್ದರು.

ಯಲ್ಲಾಪುರದ ಬಳಗಾರಿನಲ್ಲಿ ವಾಸವಾಗಿರುವ ಅವರ ಅಕ್ಕ ಶಾಂತಿ ಮಾಹಬಲೇಶ್ವರ ಪಟಗಾರ್ ಸಹ ಸಾಕಷ್ಟು ಬಾರಿ `ಕುಡಿತ ಒಳ್ಳೆಯದಲ್ಲ’ ಎಂದು ತಿಳುವಳಿಕೆ ನೀಡಿದ್ದರು. ಆದರೂ, ಸತೀಶ ಪಟಗಾರ ಯಾರ ಮಾತು ಕೇಳುತ್ತಿರಲಿಲ್ಲ. ಇಂಥಹುದೇ ಕಾರಣದಿಂದ ದಂಪತಿ ನಡುವೆ ಜಗಳವಾಗಿದ್ದು, ನ 3ರಂದು ಇಬ್ಬರು ಇಲಿ ಮದ್ದು ಸೇವಿಸಿದ್ದರು.

ಅದಾದ ಮೇಲೆ ಸತೀಶ ಪಟಗಾರ್ ತನ್ನ ಅಣ್ಣನ ಮನೆಗೆ ಹೋಗಿ `ತಾವು ಇಲಿ ಮದ್ದು ಸೇವಿಸಿದ್ದೇವೆ’ ಎಂದು ಹೇಳಿಕೊಂಡಿದ್ದರು. ತಕ್ಷಣ ಅಣ್ಣನ ಮನೆಯವರು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಆ ದಂಪತಿಯನ್ನು ದಾಖಲು ಮಾಡಿದ್ದರು. ಇಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಅದೇ ದಿನ ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು.

ಅಲ್ಲಿ ಮೂರು ದಿನಗಳ ಜೀವನ್ಮರಣ ಹೋರಾಟ ನಡೆಸಿದ ಸತೀಶ್ ಪಟಗಾರ ನ 6ರ ಮಧ್ಯಾಹ್ನ ಸಾವನಪ್ಪಿದರು. ಪ್ರಸ್ತುತ ಅವರ ಪತ್ನಿ ಶೋಭಾ ಅವರನ್ನು ಬದುಕಿಸಿಕೊಳ್ಳಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page