6

ಹಣ್ಣು ವ್ಯಾಪಾರಿಯ ಗಾಂಜಾ ವ್ಯವಹಾರ!

ದಾಂಡೇಲಿ: ಧಾರವಾಡದ ಆಳ್ನಾವರ ಬಳಿಯ ಹಣ್ಣಿನ ವ್ಯಾಪಾರಿ ಎಜಜಾ ಅಹ್ಮದ್ ಹಣ್ಣುಗಳ ಜೊತೆ ಗಾಂಜಾವನ್ನು ಸಹ ಮಾರಾಟ ಮಾಡುತ್ತಾರೆ. ಇದೀಗ ಗಾಂಜಾ ಮಾರಾಟಕ್ಕೆ ದಾಂಡೇಲಿಗೆ ಬಂದಿದ್ದ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕ್ರಿಸ್ ಮಸ್ ಹಬ್ಬದ ಅವಧಿಗೆ ಗಾಂಜಾ ವ್ಯಾಪಾರ ನಡೆಸುವ ಉದ್ದೇಶದಿಂದ ಎಜಜಾ ಅಹ್ಮದ್ ದಾಂಡೇಲಿಗೆ ಬಂದಿದ್ದ. ಹಳಿಯಾಳ ರಸ್ತೆಯ ಲಾರಿ ನಿಲ್ದಾಣದ ಬಳಿ ಆತ ಹಲವರನ್ನು ಮಾತನಾಡಿಸಿ ವ್ಯವಹಾರ ಕುದುರಿಸಿದ್ದ. `ತಾನು ದೊಡ್ಡ ಪ್ರಮಾಣದಲ್ಲಿ ಗಾಂಜಾ ಕೊಡುವೆ. ಅದನ್ನು ಮಾರಾಟ ಮಾಡಿ’ ಎಂದು ಕೆಲ ಎಜಂಟರನ್ನು ಆತ ಪುಸಲಾಯಿಸಿದ್ದ. ಅವರಿಗೆ ಗಾಂಜಾ ಉಡುಗರೆಯನ್ನು ಸಹ ಆತ ನೀಡುತ್ತಿದ್ದ.

ಅದಾಗಿಯೂ 70 ಸಾವಿರ ರೂ ಮೌಲ್ಯದ 1.812 ಕೆಜಿ ಗಾಂಜಾ ಆತನ ಬಳಿ ಉಳಿದಿದ್ದು, ಅದನ್ನು ಮಾರಾಟ ಮಾಡಿ ಊರಿಗೆ ಹೋಗಲು ನಿರ್ಧರಿಸಿದ್ದ. ಕಪ್ಪು ಬಣ್ಣದ ಡಿಯೋ ಸ್ಕೂಟಿಯಲ್ಲಿ ಬಟ್ಟೆಯಲ್ಲಿ ಸುತ್ತಿಕೊಂಡಿದ್ದ ಗಾಂಜಾ ಹಿಡಿದು ತಿರುಗಾಡುತ್ತಿದ್ದಾಗ ಆತ ಪೊಲೀಸರ ಕಣ್ಣಿಗೆ ಬಿದ್ದಿದ್ದ.

ಪೊಲೀಸ್ ಉಪನಿರೀಕ್ಷಕ ಐ ಆರ್ ಗಡ್ಡೇಕರ್ ಅವರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ತಡವರಿಸಿದ್ದ. ಸ್ಕೂಟಿಯನ್ನು ಪರಿಶೀಲಿಸಿದಾಗ ಭಾರೀ ಪ್ರಮಾಣದ ಗಾಂಜಾ ಸಿಕ್ಕಿದ್ದು, ಹಣ್ಣಿನ ವ್ಯಾಪಾರದ ಕಸುಬಿನ ಜೊತೆ ಗಾಂಜಾ ವ್ಯಾಪಾರದ ಉಪಕಸುಬು ನಡೆಸುವುದನ್ನು ಒಪ್ಪಿಕೊಂಡಿದ್ದ. ಈ ಹಿನ್ನಲೆ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page