6

ಅಕ್ರಮ ಎತ್ತು ಸಾಗಾಟ | ಅಲ್ಲಿ ಇಲ್ಲಿ ತಪ್ಪಿಸಿಕೊಂಡವರು ಇಲ್ಲಿ ಸಿಕ್ಕಿಬಿದ್ದರು!

ಯಲ್ಲಾಪುರ: ಅಕ್ಕಿ ಆಲೂರಿನಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಎತ್ತುಗಳನ್ನು ಯಲ್ಲಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಾವೇರಿಯ ಪಕ್ಕಿರೇಶ ದೊಡ್ಡಮನಿ ಹಾಗೂ ಮಂಜು ಹರಿಜನ ಸೇರಿಕೊಂಡು ಬುಲೇರೋ ವಾಹನದದಲ್ಲಿ ಆರು ಎತ್ತುಗಳನ್ನು ಸಾಗಿಸುತ್ತಿದ್ದರು. ಹೋಲಿ ರೋಜರಿ ಶಾಲೆ ಮುಂದೆ ಪಿಎಸ್‌ಐ ಶೇಡಜಿ ಚೌಹಾಣ್ ಆ ವಾಹನ ತಡೆದರು.

ಬುಲೆರೋ ಒಳಗೆ 2 ಲಕ್ಷ ರೂ ಮೌಲ್ಯದ ಜಾನುವಾರುಗಳ ಸಾಗಾಟ ಪತ್ತೆಯಾಗಿದ್ದು, ಅದಕ್ಕೆ ಸಂಬ0ಧಿಸಿದ ದಾಖಲೆಗಳನ್ನು ಪ್ರಶ್ನಿಸಿದರು. ದಾಖಲೆ ಒದಗಿಸಲು ಚಾಲಕ ಹಾಗೂ ಕ್ಲೀನರ್ ತಡವರಿಸಿದರು. ಜೊತೆಗೆ ಎತ್ತುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿರುವುದನ್ನು ಅವುಗಳನ್ನು ವಶಕ್ಕೆ ಪಡೆದರು.

ಆರು ಎತ್ತುಗಳನ್ನು ರಕ್ಷಿಸಿದ ಪೊಲೀಸರು ಅದನ್ನು ಕರಡೊಳ್ಳಿ ಗೋಶಾಲೆಗೆ ಬಿಟ್ಟು ಬಂದರು. ಹೆದ್ದಾರಿ ಮೂಲಕ ಬಂದರೂ ಎಲ್ಲಿಯೂ ಸಿಕ್ಕಿ ಬೀಳದ ಅಕ್ರಮ ಜಾನುವಾರು ಸಾಗಾಟಗಾರರನ್ನು ಯಲ್ಲಾಪುರ ಪೊಲೀಸರು ಪತ್ತೆ ಮಾಡಿದಕ್ಕಾಗಿ ಜನರು ಸಂತಸ ವ್ಯಕ್ತಪಡಿಸಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page