6

ಸಾವಿಗೂ ಮುನ್ನ ದೇವಿ ದರ್ಶನ: ಕಾರಣ ಇನ್ನೂ ನಿಗೂಢ!

ಸಿದ್ದಾಪುರ: ಶಿರಸಿ ಮಾರಿಕಾಂಬಾ ದೇವಾಲಯಕ್ಕೆ ತೆರಳಿ ದೇವರ ದರ್ಶನ ಮುಗಿಸಿದ ಭರತ ಗೌಡ ಮನೆಗೆ ಬಂದು ನೇಣು ಹಾಕಿಕೊಂಡಿದ್ದಾರೆ. ಆತನ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ.

ಸಿದ್ದಾಪುರ ಹೆಗ್ನೂರು ಹಲಸಿನಜಡ್ಡಿ ಭರತ ಗೌಡ (20) ಕೃಷಿ ಜೊತೆ ಕೂಲಿ ಕೆಲಸ ಮಾಡಿಕೊಂಡಿದ್ದರು. ಜ 7ರಂದು ಬೆಳಗ್ಗೆ 6 ಗಂಟೆಗೆ ಎದ್ದು ನಾಗಪತಿ ಗೌಡರ ಜೊತೆ ಮಾರಿಕಾಂಬಾ ದೇವಾಲಯಕ್ಕೆ ಹೋಗಿದ್ದರು. ಆ ದಿನ ಭರತ ಗೌಡ ಅವರ ತಂದೆ ರಾಮಚಂದ್ರ ಗೌಡ ಕಾನಸೂರಿಗೆ ಹೋಗಿದ್ದರು. ತಾಯಿ ತವರುಮನೆಗೆ ತೆರಳಿದ್ದರು. ಹೀಗಾಗಿ ಭರತ ಗೌಡ ದೇವಾಲಯದಿಂದ ಮರಳಿದಾಗ ಮನೆಯಲ್ಲಿ ಯಾರೂ ಇರಲಿಲ್ಲ.

ಆ ದಿನ ಮಧ್ಯಾಹ್ನ 3 ಗಂಟೆ ವೇಳೆಗೆ ರಾಮಚಂದ್ರ ಗೌಡ ಅವರು ಮನೆಗೆ ಮರಳಿದರು. ಮನೆ ಒಳಗೆ ಪ್ರವೇಶಿಸುವ ಮುನ್ನ ಭರತ ಗೌಡ ನೇತಾಡುತ್ತಿರುವುದನ್ನು ಅವರು ಕಿಟಕಿಯಿಂದ ಕಂಡರು. ದೊಡ್ಡ ಬೊಬ್ಬೆ ಹಾಕಿ ಮನೆ ಒಳಗೆ ಪ್ರವೇಶಿಸಿದರು. ಅವರ ಬೊಬ್ಬೆ ಕೇಳಿ ಅಕ್ಕ-ಪಕ್ಕದ ಮನೆಯವರು ಬಂದು ಹಗ್ಗ ತುಂಡರಿಸಿದರು. ನೇತಾಡುತ್ತಿದ್ದ ಭರತ ಗೌಡರನ್ನು ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆದರೆ, ಭರತ ಗೌಡ ದಾರಿ ಮದ್ಯೆಯೇ ಸಾವನಪ್ಪಿರುವ ಬಗ್ಗೆ ವೈದ್ಯರು ಘೋಷಿಸಿದರು. `ಸಾವಿನಲ್ಲಿ ಅನುಮಾನವಿಲ್ಲ. ಆದರೆ, ಆತನ ಸಾವಿನ ಕಾರಣ ಗೊತ್ತಾಗಬೇಕು’ ಎಂದು ರಾಮಚಂದ್ರ ಗೌಡ ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page