6

ಹಾಸ್ಟೇಲ್ ವಾಚ್‌ಮೆನ್’ಗೆ ದಿಢೀರ್ ಎದೆನೋವು: ಸಾವು

ಕಾರವಾರ: ಕರ್ನಾಟಕ ವಿಶ್ವ ವಿದ್ಯಾಲಯ ಸ್ನಾತಕೋತರ ಕೇಂದ್ರದ ವಾಚ್‌ಮೆನ್ ಆಗಿದ್ದ ತುಕಾರಾಮ ಪಟಗಾರ ಎದೆನೋವಿನಿಂದ ಸಾವನಪ್ಪಿದ್ದಾರೆ.

ಕುಮಟಾ ಕೋಡಕಣಿಯವರಾಗಿದ್ದ ತುಕಾರಾಮ ಪಟಗಾರ (50) ಅವರು ಕಾರವಾರ ಕೋಡಿಭಾಗ ವಿವೇಕಾನಂದ ನಗರದಲ್ಲಿ ವಾಸವಾಗಿದ್ದರು. ಗಂಡು ಮಕ್ಕಳ ವಸತಿ ನಿಲಯಕ್ಕೆ ಅವರು ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು. ಜನವರಿ 8ರಂದು ಕರ್ತವ್ಯದಲ್ಲಿರುವ ವೇಳೆಯಲ್ಲಿಯೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆದಿದ್ದು, ಆಸ್ಪತ್ರೆ ಸೇರುವ ಮುನ್ನವೇ ಸಾವನಪ್ಪಿದರು.

27ರ ಪೋರನಿಗೆ ಎದೆನೋವು: ಸಾವು!
ಕಾರವಾರ: ಕೂಲಿ ಕೆಲಸಕ್ಕಾಗಿ ಕಾರವಾರಕ್ಕೆ ಬಂದಿದ್ದ ಮಲ್ಲೇಶ ಕಾಂಬಳೆ (27) ಎದೆನೋವಿನಿಂದ ಸಾವನಪ್ಪಿದ್ದಾರೆ.

ಬೆಳಗಾವಿ ವಡಗಾಂವಿನ ಮಲ್ಲೇಶ್ ಕಾಂಬಳೆ ಜನವರಿ 7ರಂದು ಕೆಲಸಕ್ಕೆ ಹೋಗಿದ್ದರು. ಎದೆನೋವು ಕಾಣಿಸಿಕೊಂಡಿದ್ದರಿoದ ಅವರು ಕುಸಿದು ಬಿದ್ದರು. ರಕ್ತ ವಾಂತಿ ಮಾಡಿಕೊಂಡಿದ್ದ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ವೈದ್ಯರು ಮಲ್ಲೇಶ ಕಾಂಬಳೆ ಸಾವನಪ್ಪಿದನ್ನು ಖಚಿತಪಡಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page