6

ಅಕ್ರಮ ನಾಟಾ ಸಾಗಾಟ: ಬಲೆಗೆ ಬಿದ್ದ ಕಾಡುಗಳ್ಳರು!

ಶಿರಸಿ: ಕಳ್ಳ ನಾಟಾ ಸಾಗಿಸುತ್ತಿದ್ದವರ ಮೇಲೆ ಅರಣ್ಯಾಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ನಾಟಾ ಜೊತೆ ಇಬ್ಬರು ಸಿಕ್ಕಿ ಬಿದ್ದಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರ ಬಳಿಯ ಕಾಗಲ್’ನ ಮಾದೇವ ರಾಮಚಂದ್ರ ವಡ್ಡಾ ಹಾಗೂ ಶಿರಸಿ ನಗರದ ಕೊಪ್ಪಳ ಕಾಲೋನಿಯ ಜಗದೀಶ ಮಾದೇವ ಗುಡಿಗಾರ ಅಕ್ರಮ ನಾಟಾ ಸಾಗಿಸುತ್ತಿದ್ದರು. ಈ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದರು. ಚಂದನ್ ವುಡ್ ವರ್ಕ್ಸ್ ಹಾಗೂ ಫರ್ನಿಚರ್ ಬಳಿ ಈ ಇಬ್ಬರು ಸಿಕ್ಕಿಬಿದ್ದರು.

ಅವರ ಲಾರಿ ತಪಾಸಣೆ ನಡೆಸಿದಾಗ ಅಕೆಶಿಯಾ ಕಡಿದು ಸಾಗಿಸುತ್ತಿರುವುದು ಕಂಡು ಬಂದಿತು. ಅದಕ್ಕೆ ಯಾವುದೇ ಅನುಮತಿ ಪತ್ರಗಳು ಇರಲಿಲ್ಲ. ಹೀಗಾಗಿ ಲಾರಿ ಜೊತೆ 92 ನಾಟಾವನ್ನು ಸಹ ಅಧಿಕಾರಿಗಳು ವಶಕ್ಕೆ ಪಡೆದರು. ಅಂದಾಜು 3 ಲಕ್ಷ ರೂ ಬೆಲೆಯ ನಾಟಾ ಇದಾಗಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page