6

ಕುಟುಂಬ ಕಲಹ | ನಕಲಿ ದಾಖಲೆ ಸೃಷ್ಠಿಸಿ ಭೂಮಿ ಕಬಳಿಸಿದವರಿಗೆ ನಡುಕ!

ಸಿದ್ದಾಪುರ: ಸರ್ಕಾರಿ ನೌಕರಿಯಿಂದ ನಿವೃತ್ತರಾದ ಕೆರಿಯಾ ನಾಯ್ಕ ಹಾಗೂ ಅವರ ಪುತ್ರ ಸತೀಶ್ ನಾಯ್ಕ ಕುಟುಂಬದವರು ಕುಟುಂಬದ ಆಸ್ತಿಯಲ್ಲಿ ದಾಯಾದಿಗಳಿಗೆ ಪಾಲು ಕೊಡದೇ ವಂಚಿಸಿದ ಆರೋಪ ವ್ಯಕ್ತವಾಗಿದೆ. ಈ ಬಗ್ಗೆ ಕೆರಿಯಾ ನಾಯ್ಕ ಅವರ ಸಹೋದರ ನಾರಾಯಣ ನಾಯ್ಕ ನ್ಯಾಯಾಲಯದ ಮೊರೆ ಹೋಗಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.

`ಕೆನ್ನಾ ಅವರ ಮರಣದ ನಂತರ ಅವರ ಮಗನಾದ ತನಗೂ ಆಸ್ತಿಯಲ್ಲಿ ಪಾಲು ಬರಬೇಕಿತ್ತು. ಆದರೆ, ಈವರೆಗೂ ಹಿಸ್ಸಾ ಮಾಡದೇ ನಂತರ ನಕಲಿ ದಾಖಲೆ ಸೃಷ್ಠಿಸಿ ಅನಕ್ಷರಸ್ಥನಾದ ನನಗೆ ವಂಚಿಸಲಾಗಿದೆ’ ಎಂಬುದು ನಾರಾಯಣ ನಾಯ್ಕ ಅವರ ದೂರು. ಈ ವಿಷಯವಾಗಿ ಅವರು ಕೆರಿಯಾ ನಾಯ್ಕ, ಅವರ ಪುತ್ರರಾದ ಸತೀಶ ನಾಯ್ಕ, ಸಂಜಯ ನಾಯ್ಕ, ಸಂತೋಷ ನಾಯ್ಕ ಹಾಗೂ ಅಳಿಯ ಶಿವಾನಂದ ನಾಯ್ಕ ವಿರುದ್ಧ ದೂರು ದಾಖಲಿಸಿದ್ದಾರೆ.

`ಕರಿಯಾ ನಾಯ್ಕ ಅವರು ಮೊದಲಿನಿಂದಲೂ ಆಸ್ತಿಯನ್ನು ಅನುಭವಿಸುತ್ತ ಬಂದಿದ್ದು, ಆಸ್ತಿಯ ಹಕ್ಕನ್ನು ತನ್ನ ಹೆಸರಿಗೆ ನೊಂದಾಯಿಸುವ ಭರವಸೆ ನೀಡಿದ್ದರು. ಆದರೆ, ನಕಲಿ ದಾಖಲೆ ಸೃಷ್ಠಿಸಿ ವಂಚಿಸಿದ್ದಾರೆ’ ಎಂದವರು ದೂರಿದ್ದಾರೆ. ಇದರೊಂದಿಗೆ ಹಾರ್ಸಿಕಟ್ಟಾದ ಅತಿಕ್ರಮಣ ಮಂಜೂರಿ ಪ್ರಕ್ರಿಯೆ ವಿಷಯದಲ್ಲಿ ಜಿಪಿಎಸ್ ಗಡಿ ಗುರುತು ಆದ ಪ್ರದೇಶದಲ್ಲಿಯೂ ತಮಗೆ ಕರಿಯಾ ನಾಯ್ಕ ಕುಟುಂಬದವರಿAದ ಅನ್ಯಾಯವಾಗಿದೆ. ಅಲ್ಲಿ ಸಹ ಆಸ್ತಿ ಲಪಟಾಯಿಸುವುದಕ್ಕಾಗಿ ನಕಲಿ ದಾಖಲೆ ಸೃಷ್ಠಿಸಲಾಗಿದೆ’ ಎಂದು ನಾರಾಯಣ ನಾಯ್ಕ ಹಾಗೂ ಹಾರ್ಸಿಕಟ್ಟಾದ ಅಶೋಕ ನಾಯ್ಕ ಜಂಟಿಯಾಗಿ ದೂರು ನೀಡಿದ್ದಾರೆ.

 

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page