6

ಪರಿಸರ ಪಾಠ | ಶಾಲಾ ಮಕ್ಕಳಿಗೆ ಖುಷಿ ನೀಡಿದ ಗುಡ್ಡದ ಪ್ರವಾಸ!

ಕಾರವಾರ: ಸಹ್ಯಾದ್ರಿ ಇಕೋ ಕ್ಲಬ್ ಚಟುವಟಿಕೆಯ ಭಾಗವಾಗಿ ನಗೆ ಶಾಲೆಯ ಮಕ್ಕಳು ಸಿದ್ಧರಾಮೇಶ್ವರ ದೇವಸ್ಥಾನದ ತಪ್ಪಲಿನಲ್ಲಿರುವ ನದಿದಡದಲ್ಲಿ ಕುಳಿತು ವಿಹರಿಸಿದರು.

ಅಲ್ಲಿನ ಅರಣ್ಯ, ಪಕ್ಷಿ ಸಂಕುಲ, ಜಲಚರಗಳ ಬಗ್ಗೆ ಅಧ್ಯಯನ ನಡೆಸಿದರು. ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವುದಕ್ಕಾಗಿ ಶಾಲೆಯ ಶಿಕ್ಷಕರು ಹೊರ ಸಂಚಾರ ಆಯೋಜಿಸಿದ್ದರು. ಅರಣ್ಯದಲ್ಲಿನ ಮರ-ಗಿಡಗಳನ್ನು ಮಕ್ಕಳು ಗುರುತಿಸಿ ಅವುಗಳ ಮಹತ್ವದ ಬಗ್ಗೆ ಅರಿತುಕೊಂಡರು. ಕೆಲವರು ಮನೆಯಿಂದ ತಿಂಡಿ-ತಿನಿಸು ತೆಗೆದುಕೊಂಡು ಹೋಗಿದ್ದರು. ಇನ್ನು ಕೆಲವರು ಅಲ್ಲಿಯೇ ಅಡುಗೆ ಮಾಡಿ ಸಂಭ್ರಮಿಸಿದರು.

ಶಾಲೆಯ ಮುಖ್ಯ ಶಿಕ್ಷಕ ಅಖ್ತರ ಜಾಫರ್ ಸೈಯದ್, ಸಹಶಿಕ್ಷಕಿ ರೂಪಾ ಉಮೇಶ ನಾಯ್ಕ, ಅತಿಥಿ ಶಿಕ್ಷಕಿ ರೇಷ್ಮಾ ಹುಲಸ್ವಾರ, ಕೈಗಾ ಶಿಕ್ಷಕಿ ಪ್ರಿಯಾ ಲಾಂಜೇಕರ, ಅಡುಗೆ ಸಿಬ್ಬಂದಿ ಶೋಭಾ ಗೌಡ, ಕಾಂಚನಾ ಗೌಡ ಉಪಸ್ಥಿತರಿದ್ದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page