6

ಡವ ಡವ ಬೈಕ್ ಸದ್ದು | ಕುಮಟಾ ಠಾಣೆಯಲ್ಲಿ ಇದೀಗ ಗುಜುರಿ ರಾಶಿ!

ಕುಮಟಾ: ಕರ್ಕಶ ಶಬ್ದದೊಂದಿಗೆ ಚಲಿಸುವ ಬೈಕುಗಳನ್ನು ಹಿಡಿದ ಪೊಲೀಸರು ಬೈಕಿನ ಸೈಲೆನ್ಸರ್ ಕಿತ್ತು ರಾಶಿ ಹಾಕಿದ್ದಾರೆ. ಕಂಪನಿ ನೀಡಿದ ಸೈಲೆನ್ಸರ್ ಬದಲಿಸಿ ಬೇರೆ ಸೈಲೆನ್ಸರ್ ಅಳವಡಿಸಿಕೊಂಡಿದ್ದ ಪಡ್ಡೆ ಹುಡುಗರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಅನೇಕರು ಶಾಲೆ-ಕಾಲೇಜು ಮುಂದೆ ದೊಡ್ಡ ಸದ್ದಿನ ಬೈಕ್ ಓಡಿಸುತ್ತಿದ್ದರು. ಆಸ್ಪತ್ರೆಗಳ ಮುಂದೆ ಸಹ ಭಾರೀ ಪ್ರಮಾಣದಲ್ಲಿ ಸದ್ದು ಮಾಡುತ್ತಿದ್ದರು. ಇದನ್ನು ಗಮನಿಸಿದ ಸಿಪಿಐ ಯೋಗೀಶ 15 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಹಲವು ಬೈಕು ಸವಾರರಿಗೆ ಬಿಸಿ ಮುಟ್ಟಿಸಿದರು. ಸಿಕ್ಕಿಬಿದ್ದವರಿಗೆಲ್ಲ ಸಂಚಾರಿ ನಿಯಮದ ಬಗ್ಗೆ ಅರಿವು ಮೂಡಿಸಿದರು.

ಪಿಎಸ್‌ಐ ಮಂಜುನಾಥ ಗೌಡ, ರವಿ ಗುಡ್ಡಿ, ಸಾವಿತ್ರಿ ನಾಯಕ ಜೊತೆ ಪೊಲೀಸ್ ಸಿಬ್ಬಂದಿ ಸೇರಿ ನಿಯಮ ಉಲ್ಲಂಘಿಸುವವರ ಬಳಿ ದಂಡ ವಸೂಲಿ ಮಾಡಿದರು. ಈ ಬಗ್ಗೆ ಪ್ರಕರಣವನ್ನು ದಾಖಲಿಸಿ ವರದಿ ಸಲ್ಲಿಸಿದರು. `ಪಟ್ಟಣದಲ್ಲಿ ಈ ಪ್ರಕ್ರಿಯೆ ಇನ್ನು ನಿರಂತರವಾಗಿ ನಡೆಯಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page