6

ಲಾರಿಗೆ ಗುದ್ದಿದ ಬೈಕು: ಸವಾರ ಸಾವು!

ಮುಂಡಗೋಡ: ಮಳಗಿ – ದಾಸನಕೊಪ್ಪ ರಸ್ತೆಯಲ್ಲಿ ಚಲಿಸುತ್ತಿದ್ದ ಲಾರಿಗೆ ಬೈಕ್ ಗುದ್ದಿದ ಪರಿಣಾಮ ಬೈಕ್ ಸವಾರ ಮಹೇಶ ಶೃಂಗೇರಿ ಸಾವನಪ್ಪಿದ್ದಾರೆ.

ಮುಂಡಗೋಡು ಕಲಹಕ್ಕಲದ ಮಹೇಶ ಶೃಂಗೇರಿ ಜನವರಿ 11ರ ಸಂಜೆ ಮಳಗಿ – ದಾಸನಕೊಪ್ಪ ರಸ್ತೆಯಲ್ಲಿ ವೇಗವಾಗಿ ಬೈಕ್ ಓಡಿಸುತ್ತಿದ್ದರು. ಇದೇ ರಸ್ತೆಯಲ್ಲಿ ಮಳಗಿ ಸಿದ್ದಾಪುರ ಓಣಿಯ ಅಪ್ತಾಬ ಶೇಖ್ ಸಹ ಲಾರಿ ಓಡಿಸುತ್ತಿದ್ದರು. ಆ ಲಾರಿಗೆ ಯಾವುದೇ ಸಿಗ್ನಲ್, ಬೆಳಕು ಇರಲಿಲ್ಲ.

ಹೀಗಾಗಿ ಮುಂದಿನಿoದ ಲಾರಿ ಹೋಗುವುದನ್ನು ಗಮನಿಸದ ಮಹೇಶ್ ಆ ಲಾರಿಗೆ ಬೈಕ್ ಗುದ್ದಿದರು. ತಲೆ ಹಾಗೂ ಕುತ್ತಿಗೆಗೆ ಭಾರೀ ಪ್ರಮಾಣದಲ್ಲಿ ಗಾಯವಾಗಿದ್ದರಿಂದ ಮಹೇಶ ಶೃಂಗೇರಿ ಅಲ್ಲಿಯೇ ಸಾವನಪ್ಪಿದರು.

ಇದರೊಂದಿಗೆ ಬೈಕಿನಲ್ಲಿ ಹಿಂದೆ ಕೂತಿದ್ದ ಪ್ರಶಾಂತ ಕುರುಬರ ಸಹ ಗಾಯಗೊಂಡಿದ್ದಾರೆ. ಪೊಲೀಸ್ ಪ್ರಕರಣ ದಾಖಲಾಗಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page