6

ಮುಖವಾಡಗಳಿಗೆ ಇಲ್ಲ ಬೆಲೆ: ಇದೀಗ ಈ ಮಹಿಳೆಯೇ ದೃಷ್ಠಿ ಬೊಂಬೆ!

ಅoಕೋಲಾ: ತೋಟ-ಗದ್ದೆ-ಮನೆಗಳಿಗೆ ದೃಷ್ಠಿ ಬೀಳಬಾರದು ಎಂದು ದೃಷ್ಠಿ ಬೊಂಬೆ ಹಾಕುವುದು ಸಾಮಾನ್ಯ. ಆದರೆ, ಇದೀಗ ಕರಾವಳಿಯಲ್ಲಿ ದೃಷ್ಠಿ ಬೊಂಬೆ ಬದಲು ಮಹಿಳೆಯೊಬ್ಬರ ಫೋಟೋಗೆ ಭಾರೀ ಬೇಡಿಕೆ ಬಂದಿದೆ!

ಆ ಮಹಿಳೆ ಯಾರು? ಎಲ್ಲಿಯವರು? ಎಂದು ಯಾರಿಗೂ ಗೊತ್ತಿಲ್ಲ. ಆಕೆಯ ದೊಡ್ಡ ಕಣ್ಣುಗಳನ್ನು ನೋಡಿದ ಜನ ಒಮ್ಮೆಗೆ ಬೆಚ್ಚಿ ಬೀಳುತ್ತಿದ್ದಾರೆ. ಅಂಕೋಲಾದ ಕಲ್ಲಂಗಡಿ ಬೆಳೆಗಾರರು ತಮ್ಮ ಹೊಲದಲ್ಲಿ ಈ ಮಹಿಳೆಯ ಫೋಟೋ ಹಾಕಿದ್ದಾರೆ. ಗೋಕರ್ಣ ಬಸ್ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಮೇಲ್ಬಾಗದಲ್ಲಿಯೂ ಆ ಮಹಿಳೆಯ ಫೋಟೋ ಕಾಣಿಸಿಕೊಂಡಿದೆ.

ರಸ್ತೆ ಮೇಲೆ ಓಡಾಡುವ ಬಹುತೇಕರು ಮಹಿಳೆಯ ಫೋಟೋ ನೋಡಿ, ಫೋಟೋ ತೆಗೆಯುತ್ತಿದ್ದಾರೆ. ಚಿಕ್ಕ ಮಕ್ಕಳು ಫೋಟೋ ನೋಡಿ ಭಯಗೊಂಡಿದ್ದಾರೆ. ಗೋಕರ್ಣಕ್ಕೆ ಶೈಕ್ಷಣಿಕ ಪ್ರವಾಸಕ್ಕೆ ಬಂದ ಮಕ್ಕಳು ಫೋಟೋ ನೋಡಿ ಓಡಿದ್ದು, ಆ ಮಹಿಳೆಯ ಫೋಟೋ ನೋಡಿದ ಚಿಕ್ಕ ಮಗು ಅಳುತ್ತಿರುವ ವಿಡಿಯೋ ಸಹ ವೈರಲ್ ಆಗಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page