6

ರೈಲಿಗೆ ತಲೆಕೊಟ್ಟ ಯುವಕ: ಸಾವು

ಅಂಕೋಲಾ: ಶಾಲಾ ಮಕ್ಕಳ ಮನರಂಜನಾ ಕಾರ್ಯಕ್ರಮ ನೋಡಲು ತೆರಳಿದ್ದ ವಿಘ್ನೇಶ್ವರ ಗೌಡ ಮರಳಿ ಮನೆಗೆ ಬರದೇ ರೈಲಿಗೆ ತಲೆಕೊಟ್ಟು ಸಾವನಪ್ಪಿದ್ದಾರೆ.

ಅಂಕೋಲಾ ಬೆಳಸೆ ಹಂದಿಗದ್ದೆಯ ವಿಘ್ನೇಶ್ವರ ಗೌಡ (29) ಕೂಲಿ ಕೆಲಸ ಮಾಡಿಕೊಂಡಿದ್ದರು. ಜನವರಿ 12ರ ರಾತ್ರಿ ಬೆಳಸೆ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಕಾರ್ಯಕ್ರಮವಿರುವ ಬಗ್ಗೆ ಅರಿತ ಅವರು ಅಲ್ಲಿ ಹೋಗುವುದಾಗಿ ಹೊರಟಿದ್ದರು. ಕಾರ್ಯಕ್ರಮ ಮುಗಿದ ನಂತರ ಅವರು ಬೆಳಸೆ ಸೇತುವೆ ಕಡೆ ಹೋಗಿದ್ದು, ಮರುದಿನ ಶವವಾಗಿ ಪತ್ತೆಯಾಗಿದ್ದಾರೆ.

ಸೇತುವೆ ಬಳಿ ಕೊಂಕಣ ರೈಲು ಹಳಿಗೆ ಅಡ್ಡಲಾಗಿ ಅವರು ತಲೆ ಕೊಟ್ಟಿದ್ದು, ಚಲಿಸುವ ರೈಲಿಗೆ ಗುದ್ದಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಅವರ ಈ ಆತ್ಮಹತ್ಯೆಯ ನಿರ್ಧಾರಕ್ಕೆ ಕಾರಣ ಗೊತ್ತಾಗಲಿಲ್ಲ. ಜನವರಿ 13ರ ಬೆಳಗ್ಗೆ ಶವ ನೋಡಿದ ಅವರ ಸಹೋದರಿ ವಿನುತಾ ಗೌಡ ಪೊಲೀಸ್ ಪ್ರಕರಣ ದಾಖಲಿಸಿ, ಶವ ಪಡೆದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page