6

ಆನ್‌ಲೈನ್ ಆಮೀಷ: ಮೊದಲು ಮಾಹಿತಿ.. ನಂತರ ಮೋಸ!

ಶಿರಸಿ: ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚಿನ ದುಡ್ಡು ಸಂಪಾದನೆ ಆಮೀಷಕ್ಕೆ ಒಳಗಾದ ಮದರಸಾ ಶಿಕ್ಷಕರೊಬ್ಬರು ಕೂಡಿಟ್ಟ ಹಣವನ್ನು ಕಳೆದುಕೊಂಡಿದ್ದಾರೆ.

ಬನವಾಸಿ ಹಂಚಿನಕೇರೆ ಬಳಿಯ ವಸೀ ಅಹ್ಮದ್ ಮದರಸಾದಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಾರೆ. ತಾವು ದುಡಿದ ಹಣದಲ್ಲಿ ಅವರು 14 ಲಕ್ಷ ರೂಪಾಯಿ ಕೂಡಿಟ್ಟಿದ್ದು, ಆ ಹಣವನ್ನು ಬಂಡವಾಳವನ್ನಾಗಿಸಿ ಕೋಟಿ ರೂ ದುಡಿಯುವುದಕ್ಕಾಗಿ ಅವರು ಆನ್‌ಲೈನ್ ಮೊರೆ ಹೋಗಿದ್ದರು. ಮನೆಯಲ್ಲಿಯೇ ಕುಳಿತು ಟ್ರೆಡಿಂಗ್ ಮೂಲಕ ಕಾಸು ಸಂಪಾದಿಸುವುದಕ್ಕಾಗಿ ಅವರು ಹುಡುಕಾಟದಲ್ಲಿದ್ದರು.

ಆಗ ಅವರ ಮೊಬೈಲಿಗೆ `ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚಿನ ಹಣಗಳಿಸಲು ಸಾಧ್ಯ’ ಎಂಬ ಸಂದೇಶ ಬಂದಿತು. ಅದನ್ನು ನಂಬಿದ ಅವರು ಟೆಲಿಗ್ರಾಂ ಮೂಲಕ ಗುಂಪು ಸೇರಿದರು. ಅಲ್ಲಿಂದ ಆನ್‌ಲೈನ್ ಟ್ರೇಡಿಂಗ್ ಆಫ್ ಡೌನ್‌ಲೋಡ್ ಮಾಡಿದರು. ಅಲ್ಲಿ ಅಜಯ, ಆಕಾಶ, ಜಾವೇದ್, ಹುಸೇನ್ ಹಾಗೂ ಆದಿತಿ ಶರ್ಮಾ ಎಂಬಾತರು ಪರಿಚಯರಾದರು.

ಆ ಐದು ಜನ ಉಚಿತವಾಗಿ ಮಾಹಿತಿ ನೀಡುತ್ತಿದ್ದು, ಅವರು ಹೇಳಿದ ಕಡೆಗಳೆಲ್ಲ ವಸೀ ಅಹ್ಮದ್ ಹಣ ಹೂಡಿಕೆ ಮಾಡಿದರು. ಡಿಸೆಂಬರ್ 10ರಿಂದ ಜನವರಿ 5ರವರೆಗೆ ಒಟ್ಟು 1470707ರೂ ಹೂಡಿಕೆ ಮಾಡಿದ್ದರು. ನಂತರ ತಮ್ಮ ಹಣ ಹಿಂಪಡೆಯಲು ಪ್ರಯತ್ನಿಸಿದಾಗ ಅದು ಸಾಧ್ಯವಾಗಲಿಲ್ಲ. ಈ ಬಗ್ಗೆ ಆನ್‌ಲೈನ್ ಟ್ರೇಡಿಂಗ್ ಆಫ್ ಮೂಲಕ ಪ್ರಶ್ನಿಸಿದಾಗ ವಸೀ ಅಹ್ಮದ್ ಅವರನ್ನು ಆ ಗ್ರೂಪಿನಿಂದ ಹೊರದಬ್ಬಲಾಯಿತು. ಜೊತೆಗೆ ಆಫ್’ನಿಂದಲೂ ಬ್ಲಾಕ್ ಮಾಡಲಾಯಿತು.

`ಲಾಭವೂ ಇಲ್ಲ. ಹೂಡಿಕೆಯ ದುಡ್ಡು ಸಿಕ್ಕಿಲ್ಲ’ ಎಂಬ ಕಾರಣಕ್ಕೆ ವಸೀ ಅಹ್ಮದ್ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಾರವಾರದ ಸಿಎನ್‌ಇ ಠಾಣೆಯ ಪೊಲೀಸರು ಮೋಸ ಮಾಡಿದವರ ಹುಡುಕಾಟ ನಡೆಸಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page