6

ಊಟದ ಬದಲು ಸರಾಯಿ ಸೇವನೆ.. ಹೊಟ್ಟೆನೋವು ಸಹಿಸದೇ ಆತ್ಮಹತ್ಯೆ.. ಆಸ್ಪತ್ರೆಗೆ ಹೋದರೂ ನರಳಾಡಿ ಸತ್ತ ಕಟ್ಟಡ ಕಾರ್ಮಿಕ!

ಶಿರಸಿ: ಸಮಯಕ್ಕೆ ಸರಿಯಾಗಿ ಊಟ ಮಾಡದೇ ಸರಾಯಿ ಸೇವಿಸಿ ಬದುಕುತ್ತಿದ್ದ ಫಕೀರಪ್ಪ ಬೋವಿವಡ್ಡರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ನೇಣು ಹಾಕಿಕೊಂಡು ನರಳಾಡುತ್ತಿದ್ದಾಗ ಅದನ್ನು ತಪ್ಪಿಸಿ ಆಸ್ಪತ್ರೆಗೆ ಕರೆದೊಯ್ದರೂ ಅವರು ಬದುಕಲಿಲ್ಲ.

ಶಿರಸಿ ಗಣೇಶ ನಗರದ ಮಾರುತಿ ದೇವಸ್ಥಾನದ ಬಳಿ ಫಕೀರಪ್ಪ ಬೋವಿವಡ್ಡರ್ ವಾಸವಾಗಿದ್ದರು. ಅವರು ಗೌಂಡಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಆದರೆ, ನಿತ್ಯ ಅವರು ಸಮಯಕ್ಕೆ ಸರಿಯಾಗಿ ಊಟ ಸೇವಿಸುತ್ತಿರಲಿಲ್ಲ. ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊAಡಿದ್ದರು.

ಇದರ ಪರಿಣಾಮ ಅವರಿಗೆ ಹೊಟ್ಟೆ ನೋವು ಬಂದಿದ್ದು, ಅದನ್ನು ಸಹಿಸದೇ ಆತ್ಮಹತ್ಯೆಯ ನಿರ್ಧಾರ ಮಾಡಿದ್ದರು. ಜನವರಿ 16ರಂದು ಮನೆಯಲ್ಲಿದ್ದ ಅವರು ಫ್ಯಾನಿಗೆ ನೇಣು ಹಾಕಿಕೊಂಡು ಸಾಯುವ ಪ್ರಯತ್ನ ನಡೆಸಿದರು. ಇದನ್ನು ನೋಡಿದ ಕುಟುಂಬದವರು ತಕ್ಷಣ ಅವರನ್ನು ಕೆಳಗಿಳಿಸಿ ಟಿಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿದರು. ನರಳಾಡುತ್ತಿದ್ದ ಅವರು ಮಧ್ಯಾಹ್ನ 1 ಗಂಟೆ ಆಸುಪಾಸಿನಲ್ಲಿ ಕೊನೆ ಉಸಿರೆಳೆದರು.

ಈ ಬಗ್ಗೆ ಗಣೇಶ ಬೋವಿವಡ್ಡರ್ ಪೊಲೀಸರಿಗೆ ವರದಿ ಒಪ್ಪಿಸಿ, ಪ್ರಕರಣ ದಾಖಲಿಸಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page