6

ಗುಡ್ಡ ಏರಿ ಗುಡ್ಡಳ್ಳಿ ತಲುಪಿದ ಜಿಲ್ಲಾಧಿಕಾರಿ!

ಮೂಲಭೂತ ಸೌಕರ್ಯ ಕಲ್ಪಿಸುವಂತೆ ಗುಡ್ಡಳ್ಳಿ ಜನ ನೀಡಿದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ  ಲಕ್ಷ್ಮೀಪ್ರಿಯಾ ದಿಢೀರ್ ಆಗಿ ಗುಡ್ಡ ಏರಿ ಆ ಹಳ್ಳಿಗೆ ಭೇಟಿ ನೀಡಿದ್ದಾರೆ. ಜಿಲ್ಲಾಧಿಕಾರಿ ಆಗಮನದಿಂದ ಸಂತಸಗೊ0ಡ ಊರಿನ ಜನ ಅದ್ಧೂರಿಯಾಗಿ ಅವರನ್ನು ಬರಮಾಡಿಕೊಂಡಿದ್ದು, ಶಾಲು ಹೊದೆಸಿ ಗೌರವಿಸಿದರು.

ಕಾರವಾರ ನಗರಸಭೆ ವ್ಯಾಪ್ತಿಗೆ ಒಳಪಡುವ ಗುಡ್ಡಳ್ಳಿಗೆ ಈವರೆಗೂ ಮೂಲಭೂತ ಸೌಕರ್ಯವಿಲ್ಲ. ಅಲ್ಲಿನ ಜನ ಸಮಯಕ್ಕೆ ಸರಿಯಾಗಿ ನಗರಸಭೆಗೆ ತೆರಿಗೆ ಪಾವತಿಸುತ್ತಿದ್ದರೂ ಅವರಿಗೆ ನಗರದ ಯಾವ ಸೌಲಭ್ಯಗಳು ಸಿಗುತ್ತಿಲ್ಲ. ಊರಿಗೆ ತೆರಳಲು ರಸ್ತೆ ಸಂಪರ್ಕ ಸಹ ಸರಿಯಾಗಿಲ್ಲ. ಈ ಹಿನ್ನಲೆ ಕಳೆದ ಹಲವು ವರ್ಷಗಳಿಂದ ಗುಡ್ಡಳ್ಳಿ ಭಾಗದವರು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ, ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ.

ಉತ್ತರ ಕನ್ನಡ ಜಿಲ್ಲೆಗೆ ಹೊಸದಾಗಿ ಯಾವ ಅಧಿಕಾರಿ ಬಂದರೂ ಗುಡ್ಡಳ್ಳಿ ಭಾಗದವರಿಗೆ ಹೊಸ ಆಶಾಭಾವನೆ ಮೂಡುತ್ತದೆ. ಹೀಗಾಗಿ `ನಮ್ಮೂರಿನ ಸಮಸ್ಯೆ ಬಗೆಹರಿಸಿ’ ಎಂದು ಆ ಭಾಗದವರು ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತಾರೆ. ಊರಿನ ಸಮಸ್ಯೆಗಳ ಬಗ್ಗೆ ವಿವರಿಸುತ್ತಾರೆ. ಅದರಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರನ್ನು ಗುಡ್ಡಳ್ಳಿಯ ಜನ ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡಿದ್ದರು. ಊರಿನವರ ಸಮಸ್ಯೆ ಆಲಿಸಿದ ಲಕ್ಷ್ಮೀಪ್ರಿಯಾ ಶುಕ್ರವಾರ ದಿಢೀರ್ ಆಗಿ ಆ ಊರಿಗೆ ತೆರಳಿದರು!

ಕಾರವಾರದಿಂದ 3 ಕಿಮೀ ದೂರದಲ್ಲಿದ್ದರೂ ಇಲ್ಲಿ ನಕುಲ್ ಅವರನ್ನು ಹೊರತುಪಡಸಿ ಯಾವ ಜಿಲ್ಲಾಧಿಕಾರಿಗಳು ಭೇಟಿ ನೀಡಿರಲಿಲ್ಲ. ಪ್ರಸ್ತುತ ಲಕ್ಷ್ಮೀಪ್ರಿಯಾ ಅವರು ಗುಡ್ಡಳ್ಳಿಗೆ ಭೇಟಿ ನೀಡಿದ ಎರಡನೇ ಜಿಲ್ಲಾಧಿಕಾರಿ ಹಾಗೂ ಮೊದಲ ಮಹಿಳಾ ಜಿಲ್ಲಾಧಿಕಾರಿಯಾಗಿದ್ದಾರೆ. ಈ ಹಿನ್ನಲೆ ಆ ಭಾಗದ ಜನ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡರು. ಶಾಲು ಹೊದೆಸಿ ಗೌರವಿಸಿದರು. ಅದಾದ ನಂತರ ಊರಿನ ಮುಖ್ಯ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ, ಪರಿಹಾರ ಒದಗಿಸುವಂತೆ ಕೇಳಿಕೊಂಡರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page