6

ಬಾಲಕಿ ಮೇಲೆ ದೌರ್ಜನ್ಯ: ಆ ಅತ್ಯಾಚಾರಿ ಅಪ್ರಾಪ್ತನಲ್ಲ!

ಯಲ್ಲಾಪುರದಲ್ಲಿ 1ನೇ ತರಗತಿ ವಿದ್ಯಾರ್ಥಿಯನ್ನು ಫುಸಲಾಯಿಸಿ ಅತ್ಯಾಚಾರ ಮಾಡಿದ ಆರೋಪಿ ಅಪ್ರಾಪ್ತನಲ್ಲ. ಹೀಗಾಗಿ ಆತನ ಹೆಸರನ್ನು ಈ ದಿನ ಬಹಿರಂಗಪಡಿಸಲಾಗಿದೆ.

ಏಪ್ರಿಲ್ 1ರಂದು ಯಲ್ಲಾಪುರ ತಾಲೂಕಿನ ಕಿರವತ್ತಿ ಬಳಿಯ ಕಾಡುಸಿದ್ದೇಶ್ವರ ದೇವಾಲಯದಲ್ಲಿ ಹಳಿಯಾಳದ ಭಾಗವತಿಯ ಅಸ್ಲಾಂ ಆದಂ ಸಾಬ್ ಸುತಾರ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ್ದ. ಅತ್ಯಾಚಾರ ಆರೋಪಿ ಸಹ ಅಪ್ತಾಪ್ತ ಎಂದು ಹೇಳಲಾಗಿದ್ದು, ಆತನ ವಯಸ್ಸಿನ ಬಗ್ಗೆ ನಿಖರತೆ ಇರಲಿಲ್ಲ. ಹೀಗಾಗಿ ಏ 1ರ ವರದಿಯಲ್ಲಿ ಅತ್ಯಾಚಾರಿಯ ಹೆಸರು-ವಿಳಾಸವನ್ನು ನಮೂದಿಸಿರಲಿಲ್ಲ. ಇದೀಗ `ಆತ ಅಪ್ರಾಪ್ತ ಅಲ್ಲ’ ಎಂಬ ವಿಷಯ ಹೊರಬಂದಿದೆ.

ಹಳಿಯಾಳದ ಭಾಗವತಿಯ ಅಸ್ಲಾಂ ಆದಂ ಸಾಬ್ ಸುತಾರ್ ತನ್ನ ಸಂಬoಧಿಕರ ಮನೆಗೆ ಆಗಮಿಸಿದ್ದ. ಅಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಲಕಿಗೆ ಮೊದಲು ಚಾಕಲೇಟು ಕೊಡುವುದಾಗಿ ನಂಬಿಸಿದ್ದ. ಆಟ ಆಡೋಣ ಎಂದು ಫುಸಲಾಯಿಸಿ ಕಾಡುಸಿದ್ದೇಶ್ವರ ದೇವಾಲಯದ ಬಳಿ ಕರೆದೊಯ್ದು ಬಾಲಕಿಯ ಬಟ್ಟೆ ಬಿಚ್ಚಿದ್ದ. ಬಾಲಕಿ ಅಳಲು ಶುರು ಮಾಡಿದಾಗ ಆಕೆಯ ಕೆನ್ನೆಗೆ ಬಾರಿಸಿ ಹಿಂಸೆ ನೀಡಿದ್ದ. ಅದಾದ ನಂತರ ಆ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.

ಬಾಲಕಿ ಅಳುತ್ತ ಬರುತ್ತಿರುವುದನ್ನು ನೋಡಿದ ಆ ಊರಿನ ಯುವತಿ ಕಾರಣ ಪ್ರಶ್ನಿಸಿದ್ದರು. ಆಗ, ಅತ್ಯಾಚಾರ ನಡೆದಿರುವುದು ಗೊತ್ತಾಯಿತು. ಊರಿನವರೆಲ್ಲ ಸೇರಿ ಅಸ್ಲಾಂ ಆದಂ ಸಾಬ್ ಸುತಾರ್’ನನ್ನು ಥಳಿಸಿದ್ದರು. ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಸ್ಲಾಂ ಆದಂ ಸಾಬ್ ಸುತಾರ್ ಚೇತರಿಸಿಕೊಂಡ ನಂತರ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬುಧವಾರ ದೊರೆತ ಪ್ರಾಥಮಿಕ ಮಾಹಿತಿ ಪ್ರಕಾರ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಹಾಗೂ ಅತ್ಯಾಚಾರ ನಡೆಸಿದ ಕಾಮುಕ ಇಬ್ಬರೂ ಅಪ್ರಾಪ್ತರೆಂದು ಭಾವಿಸಲಾಗಿತ್ತು. ಹೀಗಾಗಿ ಸಂತ್ರಸ್ತೆ ಜೊತೆ ಆರೋಪಿಯ ಹೆಸರು-ವಿಳಾಸ-ಫೋಟೋವನ್ನು ಮಾಧ್ಯಮಗಳು ಬಹಿರಂಗಪಡಿಸಿರಲಿಲ್ಲ. ಇದೀಗ ಅತ್ಯಾಚಾರ ಆರೋಪಿಯ ವಯಸ್ಸು ಖಚಿತವಾಗಿದ್ದು, ಆತನಿಗೆ 19 ವರ್ಷ ಪೂರ್ಣವಾಗಿರುವುದು ದೃಢವಾಗಿದೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page