6

ಪರ ಪುರುಷನ ಫೋನು: ಗಂಡನಿಗೆ ಬೆದರಿ ಪ್ರಾಣಬಿಟ್ಟ ಮಹಿಳೆ!

ಕುಮಟಾದ ಸುಷ್ಮಾ ದೇಶಭಂಡಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಂಡ ಹಾಗೂ ಕುಟುಂಬದವರಿಗೆ ಹೆದರಿ ಅವರು ಪ್ರಾಣ ತ್ಯಜಿಸಿದ್ದಾರೆ!

ಹೊನ್ನಾವರದ ಕುಲಗೋಡದವರಾಗಿದ್ದ ಸುಷ್ಮಾ ದೇಶಭಂಡಾರಿ (30) ಅವರು ಕುಮಟಾದ ಕಗಾಲಿನ ಹರೀಶ ದೇಶಭಂಡಾರಿ ಅವರನ್ನು ವರಿಸಿದ್ದರು. ಮನೆಯಲ್ಲಿಯೇ ಇರುತ್ತಿದ್ದ ಅವರು ಆಗಾಗ ಒಬ್ಬ ಹುಡುಗನೊಂದಿಗೆ ಫೋನ್ ಮೂಲಕ ಮಾತನಾಡುತ್ತಿದ್ದರು.

ಈ ವಿಷಯ ಅವರ ಪತಿಗೆ ಗೊತ್ತಾಗಿದ್ದು, ಪರ ಪುರುಷನ ಜೊತೆ ಫೋನಿನಲ್ಲಿ ಮಾತನಾಡುವ ವಿಷಯ ಗಂಡನಿಗೆ ಗೊತ್ತಾದ ಕಾರಣ ನೊಂದಿದ್ದರು. ಅದಾದ ನಂತರ ತಮ್ಮ ರೂಪೇಶ ದೇಶಭಂಡಾರಿ ಅವರಿಗೂ ಈ ವಿಷಯ ಗೊತ್ತಾಯಿತು. ಇದರಿಂದ ಇನ್ನಷ್ಟು ಕುಗ್ಗಿದ ಸುಷ್ಮಾ ದೇಶಭಂಡಾರಿ ಆತ್ಮಹತ್ಯೆಯ ಯೋಜನೆ ಮಾಡಿದ್ದರು.

ಅದರ ಪ್ರಕಾರ ಏಪ್ರಿಲ್ 3ರಂದು ಮನೆಯೊಳಗಿನ ಮೆಟ್ಟಿಲಿನ ಸರಳಿಗೆ ಸುಷ್ಮಾ ದೇಶಭಂಡಾರಿ ಹಗ್ಗ ಬಿಗಿದರು. ಅದನ್ನು ಕುಣಿಕೆಯನ್ನಾಗಿಸಿ ತಮ್ಮ ಕೊರಳಿಗೆ ಸಿಕ್ಕಿಸಿಕೊಂಡು ಆತ್ಮಹತ್ಯೆಗೆ ಶರಣಾದರು.

ಅಕ್ಕನ ಸಾವಿನ ಬಗ್ಗೆ ಅರಿತ ರೂಪೇಶ ದೇಶಭಂಡಾರಿ ಈ ಎಲ್ಲಾ ವಿಷಯಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಪ್ರಕರಣ ದಾಖಲಿಸಿ ಕುಟುಂಬದವರು ಶವ ಪಡೆದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page