6

ಮದುವೆಯೂ ಇಲ್ಲ, ಹಣವೂ ಇಲ್ಲ: ಉತ್ತರದ ಹೆಣ್ಣಿನಾಸೆ ತೋರಿ ಹಳ್ಳಕ್ಕೆ ಕೆಡವಿದರು

ಉತ್ತರ ಪ್ರದೇಶದ ಹೆಣ್ಣಿನೊಂದಿಗೆ ಮದುವೆ ಮಾಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಬಗ್ಗೆ ನಾಲ್ಕು ಜನರ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರ ಪ್ರದೇಶದ ಮಿರ್ಜಾಪುರದ ಪೂಜಾ ಮಿಶ್ರಾ, ಹಾಲಿ ಸೋಂದಾ ನಿವಾಸಿಯಾಗಿರುವ ಸೂತ್ರೆಮನೆಯ ಲಕ್ಷ್ಮೀನಾರಾಯಣ ಭಟ್ಟ, ಸೋಂದಾದ ನಾಗರಾಜ ಭಟ್ಟ ಬಕ್ಕಳ ಹಾಗೂ ಉತ್ತರ ಪ್ರದೇಶದ ರೇಣುಕಾಕೋಟ್ ನ ಮಾಲಾ ತ್ರಿಪಾಠಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳಚೆ ಗ್ರಾಮದ ಕರಿಮನೆಯ ಪುರೋಹಿತ ರಾಮಕೃಷ್ಣ ಅನಂತ ಭಟ್ಟ ಎಂಬವರಿಗೆ ಉತ್ತರ ಪ್ರದೇಶದ ಹೆಣ್ಣಿನೊಂದಿಗೆ ಮದುವೆ ಮಾಡಿಸಿಕೊಡುವುದಾಗಿ ಹೇಳಿ ಉತ್ತರ ಪ್ರದೇಶಕ್ಕೆ ಕರೆದೊಯ್ಯಲಾಗಿತ್ತು.
ಅಲ್ಲಿ ಪೂಜಾ ಮಿಶ್ರಾ ಜೊತೆ ನಿಶ್ಚಿತಾರ್ಥವನ್ನೂ ಮಾಡಲಾಗಿತ್ತು. ಇದೇ ವೇಳೆ ಮದುವೆ ಮಾಡಿಸಿಕೊಡುವ ಕರಾರಿನೊಂದಿಗೆ 6 ಲಕ್ಷ ರೂ ಹಣವನ್ನು ಭಟ್ಟರಿಂದ ಈ ನಾಲ್ವರು ಪಡೆದಿದ್ದರು.

ಕಳೆದ ಆಗಸ್ಟ್ 16 ರಂದು ಕಳಚೆಯ ರಾಮಕೃಷ್ಣ ಭಟ್ಟರ ಮನೆಗೆ ಬಂದ ಮದುಮಗಳಾದ ಪೂಜಾ ಮಿಶ್ರಾ, ಬೆಳಗ್ಗೆ ವಾಕಿಂಗ್ ಹೋಗುವ ನೆಪದಲ್ಲಿ ನಾಪತ್ತೆಯಾಗಿದ್ದಾಳೆ.
ಮದುವೆಯೂ ಇಲ್ಲ, ಕೊಟ್ಟ ಹಣವೂ ಇಲ್ಲ ಎಂದು ವಂಚನೆಗೊಳಗಾದ ರಾಮಕೃಷ್ಣ ಭಟ್ಟ ದೂರು ನೀಡಿದ್ದು, ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page