6

ಚಿಕಿತ್ಸೆ ನೀಡುವ ಕೈ, ಮೂರ್ತಿ ತಯಾರಿಸಲೂ ಸೈ

ವೈದ್ಯರೆಂದರೆ ಸದಾ ಕರ್ತವ್ಯದಲ್ಲಿರುವವರು, ಹಬ್ಬ-ಹರಿದಿನಗಳನ್ನು ಆಚರಿಸಲೂ ಸಮಯ ಇಲ್ಲದ ಸೇವೆ ಅವರದು. ಅಂತಹ ಒತ್ತಡದ ಕಾರ್ಯದ ನಡುವೆಯೂ ಬಿಡುವು ಮಾಡಿಕೊಂಡು ಗಣಪತಿಯ ಮೂರ್ತಿಯನ್ನು ತಾವೇ ತಯಾರಿಸಿ ಗಮನ ಸೆಳೆದಿದ್ದಾರೆ ಯಲ್ಲಾಪುರದ ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್.

ಪ್ರತಿ ವರ್ಷ ಗಣೇಶ ಚತುರ್ಥಿಯಂದು ತಮ್ಮ ಮನೆಯಲ್ಲಿ ಪೂಜಿಸುವ ಮೂರ್ತಿಯನ್ನು ತಾವೇ ತಯಾರಿಸುತ್ತ ಬಂದಿರುವುದು ಪವಾರ ಅವರ ವಿಶೇಷತೆ.

ಪ್ರತಿ ವರ್ಷ ಕರ್ತವ್ಯದ ನಡುವೆಯೂ ಸಮಯ ಮಾಡಿಕೊಂಡು ಈ ಕಾರ್ಯವನ್ನು ಮಾಡಿಕೊಂಡು ಬಂದಿದ್ದಾರೆ. ರಾಸಾಯನಿಕ ಬಣ್ಣಗಳನ್ನು ಬಳಸದೇ ಪರಿಸರ ಸ್ನೇಹಿ ಗಣಪನ ಮೂರ್ತಿ ತಯಾರಿಸುತ್ತಾರೆ.

ಸುರೇಶ ಪೂಜಾರಿ ಎಂಬವರ ಮಾರ್ಗದರ್ಶನದಲ್ಲಿ ಮೂರ್ತಿ ತಯಾರಿಕೆಯ ಕಲೆಯನ್ನು ಪವಾರ್ ಅಳವಡಿಸಿಕೊಂಡಿದ್ದಾರೆ.

 

ಈ ಬಾರಿ ನಟರಾಜನ ಭಂಗಿಯಲ್ಲಿ ನಿಂತ ಗಣಪತಿಯ ಮೂರ್ತಿಯನ್ನು ಪವಾರ್ ರಚಿಸಿದ್ದು ಆಕರ್ಷಕವಾಗಿ ಮೂಡಿ ಬಂದಿದೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page