6

ದೇವಿ ಮೈದಾನದಲ್ಲಿ 43 ನೇ ವರ್ಷ ಗಜಾನನೋತ್ಸವ: ವಿವಿಧ ಕಾರ್ಯಕ್ರಮಗಳ ಆಯೋಜನೆ

ಯಲ್ಲಾಪುರದ ಶ್ರೀ ದೇವಿ ಮೈದಾನ ಗಜಾನನೋತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿದ ಗದ್ದುಗೆಯಲ್ಲಿ ಬೆಳ್ಳಿ ಪ್ರಭಾವಳಿಯ ಅಲಂಕಾರದೊಂದಿಗೆ ಗಣಪತಿ ಶೋಭಿಸುತ್ತಿದ್ದಾನೆ.‌

ದೇವಿ ಮೈದಾನ ಉತ್ಸವ ಸಮಿತಿಯ ವತಿಯಿಂದ 43 ನೇ ವರ್ಷದ ಗಣೇಶೋತ್ಸವ ಈ ಬಾರಿ ನಡೆಯುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.

ಆ.29 ಶುಕ್ರವಾರ ಸಂಜೆ 6 ಕ್ಕೆ ನಾಗರಾಜ ವೈದ್ಯ ಹಳವಳ್ಳಿ ಹಾಗೂ ಶಿಷ್ಯರಿಂದ ಸಂಗೀತ ಕಾರ್ಯಕ್ರಮ, ಆ.30 ಶನಿವಾರ ಸಂಜೆ 6 ಕ್ಕೆ ಪ್ರಣತಿ ಆಚಾರಿ, ಪ್ರಣತಿ ಹೆಗಡೆ ಜೂಜಿನಬೈಲ

ಸೃಜನಾ ಪಿ.ಬಿ ಅವರಿಂದ ಭರತನಾಟ್ಯ ಕಾರ್ಯಕ್ರಮ, ಆ.31 ರವಿವಾರ ಸಂಜೆ 6 ಕ್ಕೆ ಯಕ್ಷ ಸಂಸ್ಕೃತಿ ಪರಿವಾರ ಹಸರಪಾಲ ಇವರಿಂದ ಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.

ಸೆ 1 ಸೋಮವಾರ ಸಂಜೆ 6 ಕ್ಕೆ ಸ.ಹಿ.ಪ್ರಾ ಶಾಲೆ ಸವಣಗೇರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮುಕ್ತ ಅಭಿನಯಗೀತೆ ಸ್ಪರ್ಧೆ,ಛದ್ಮವೇಷ ಸ್ಪರ್ಧೆ, ಸೆ 2 ಮಂಗಳವಾರ ಸಂಜೆ 6 ಕ್ಕೆ ಸದಾಶಿವ ಭಟ್ಟ ಮಲವಳ್ಳಿ ತಂಡದಿಂದ ದಕ್ಷಯಜ್ಞ ಯಕ್ಷಗಾನ ಪ್ರದರ್ಶನ‌ ನಡೆಯಲಿದೆ.

ಸೆ.3 ಬುಧವಾರ ಸಂಜೆ 6 ಕ್ಕೆ ವಿಶ್ವೇಶ್ವರ ಹೆಬ್ಬಾರ ಹಾಲೆಪಾಲ ಅವರ ಸಂಯೋಜನೆಯಲ್ಲಿ ಪ್ರಸಿದ್ಧ ಕಲಾವಿದರಿಂದ ಯಕ್ಷ ಗಾನ ವೈಭವ ನಡೆಯಲಿದೆ. ಸೆ.4 ಗುರುವಾರ ಸಂಜೆ 6 ಕ್ಕೆ ಶ್ರೀನಿಧಿ ಯಕ್ಷ ಬಳಗ ಉಪಳೇಶ್ವರ ಇವರಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನವಿದೆ.
ಪ್ರತಿ ದಿನ ಶ್ರೀ ದೇವರ ಸಮ್ಮುಖದಲ್ಲಿ ಭಜನಾ ಸೇವೆಗೆ ಅವಕಾಶವಿದೆ ಎಂದು ಸಮಿತಿಯ ಅಧ್ಯಕ್ಷ ಗಣೇಶ ಪತ್ತಾರ,ಪ್ರಧಾನಕಾರ್ಯದರ್ಶಿ ಸಂಜೀವಕುಮಾರ ಹೊಸ್ಕೇರಿ ತಿಳಿಸಿದ್ದಾರೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page