6

ಮಾಗೋಡಿನಲ್ಲಿ ವಿಜೃಂಭಣೆಯ ಗಜಾನನೋತ್ಸವ

ಯಲ್ಲಾಪುರ ತಾಲೂಕಿನ ಮಾಗೋಡ ಕಾಲೋನಿಯಲ್ಲಿ ಸಾರ್ವಜನಿಕ ಗಜಾನನೋತ್ಸವ ವಿಜೃಂಭಣೆಯಿಂದ ನಡೆಯಿತು.

ಸ್ಥಳೀಯ ಕಲಾವಿದರಿಂದ ನಡೆದ ಯಕ್ಷ ಗಾಯನ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಭಾಗವತರಾದ ಮಹಾಬಲೇಶ್ವರ ಭಟ್ಟ ಬೆಳಶೇರು, ಶಶಾಂಕ ಬೋಡೆ, ಗೋಪಾಲಕೃಷ್ಣ ಭಟ್ಟ ಮೊಟ್ಟೆಪಾಲ ವಿವಿಧ ಯಕ್ಷಗಾನ ಪ್ರಸಂಗಗಳ ಪದ್ಯಗಳನ್ನು ಪ್ರಸ್ತುತಪಡಿಸಿದರು. ನಾಗಪ್ಪ ಕೋಮಾರ‌ ಮದ್ದಲೆವಾದಕರಾಗಿ, ಪ್ರಮೋದ ಕಬ್ಬಿನಗದ್ದೆ, ಸಂಜಯ ಕೋಮಾರ ಚಂಡೆವಾದಕರಾಗಿ ಭಾಗವಹಿಸಿದ್ದರು.‌

ಶ್ರೀನಿಧಿ ಯಕ್ಷ ಕಲಾ ಬಳಗ ಉಪಳೇಶ್ವರ ಇವರಿಂದ ಸುಧನ್ವ ಮೋಕ್ಷ ಯಕ್ಷಗಾನ ಪ್ರದರ್ಶನಗೊಂಡಿತು. ಕಾರ್ಯಕ್ರಮವನ್ನು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ ಉದ್ಘಾಟಿಸಿದರು.‌ ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ, ನಿರ್ದೇಶಕ ಎಂ.ಎನ್.ಭಟ್ಟ, ಪ್ರಮುಖರಾದ ತಮ್ಮಣ್ಣ ಭಟ್ಟ, ಸವಿತಾ ಭಟ್ಟ, ಗಜಾನನೋತ್ಸವ ಸಮಿತಿಯ ಅಧ್ಯಕ್ಷ ಶ್ರೀಧರ ಹೆಗಡೆ ಹೆಗ್ಗುಂಬಳಿ, ಸಮಿತಿಯ ಪ್ರಮುಖರಾದ ನರಸಿಂಹ ಭಟ್ಟ ಮೇಲಿನಕುಂಕಿ, ಮಂಜುನಾಥ ಹೆಗಡೆ ಹೆಗ್ಗುಂಬಳಿ, ಪುರೋಹಿತರಾದ ನರಸಿಂಹ ಭಟ್ಟ ಹಶಿನಮನೆ, ಪರಮೇಶ್ವರ ಹೆಗಡೆ ಇತರರಿದ್ದರು.

ಯಕ್ಷಗಾನ ಪ್ರದರ್ಶನದಲ್ಲಿ ಶಶಾಂಕ ಬೋಡೆ, ನರಸಿಂಹ ಭಟ್ಟ ಹಂಡ್ರಮನೆ, ಗಣಪತಿ ಹೆಗಡೆ ಕಣ್ಣಿಜಡ್ಡಿ, ಪ್ರಮೋದ ಕಬ್ಬಿನಗದ್ದೆ ಹಿಮ್ಮೇಳದಲ್ಲಿ ಭಾಗವಹಿಸಿದ್ದರು.
ಅರ್ಜುನನಾಗಿ ಶ್ರೀಲತಾ ರಾಜೀವ, ಸುಧನ್ವನಾಗಿ ನಿಧಿ ಭಟ್ಟ, ಪ್ರದ್ಯುಮ್ನನಾಗಿ ಆದರ್ಶ ಭಟ್ಟ ಈರಾಪುರ, ಕೃಷ್ಣನಾಗಿ ವೆಂಕಟರಮಣ ಕವಡಿಕೆರೆ, ಕುವಲೆಯಾಗಿ ಸುನೀತಾ ಸಿದ್ದಿ ಪಾತ್ರ ನಿರ್ವಹಿಸಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page