6

ದೇವಿ ಮೈದಾನದಲ್ಲಿ ‘ಕೃಷ್ಣ ಸಂಧಾನ’

ಯಲ್ಲಾಪುರದ ದೇವಿ ಮೈದಾನದಲ್ಲಿ ಸಾರ್ವಜನಿಕ ಗಜಾನನೋತ್ಸವದ ಪ್ರಯುಕ್ತ ಹಸರಪಾಲಿನ ಯಕ್ಷ ಸಂಸ್ಕೃತಿ ಪರಿವಾರದ‌ ಮಕ್ಕಳು ನರಸಿಂಹ ಭಟ್ಟ ಕುಂಕಿಮನೆ ನಿರ್ದೇಶನದಲ್ಲಿ ಪ್ರಸ್ತುತಪಡಿಸಿದ ಶ್ರೀಕೃಷ್ಣ ಸಂಧಾನ ತಾಳಮದ್ದಲೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.

ಹಿಮ್ಮೇಳದಲ್ಲಿ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ, ಮದ್ದಲೆವಾದಕರಾಗಿ ವಿಶ್ವೇಶ್ವರ ಹೆಬ್ಬಾರ ಹಾಲೆಪಾಲ ಭಾಗವಹಿಸಿದ್ದರು.

ಕೃಷ್ಣನಾಗಿ ಶ್ರೀರಕ್ಷಾ ಮೆಣಸುಮನೆ, ಶ್ರೀಲತಾ ಮೆಣಸುಮನೆ, ಕೌರವನಾಗಿ ಮಹತಿ ಮೆಣಸುಮನೆ, ಧರ್ಮರಾಯನಾಗಿ ಶ್ರೇಯಾ ಶೇಡಿಜಡ್ಡಿ, ಭೀಮನಾಗಿ ಮಾನಸಾ ದುರ್ಗದ, ದ್ರೌಪದಿಯಾಗಿ ಸ್ನೇಹಾ ಮೆಣಸುಪಾಲ, ವಿದುರನಾಗಿ ನಮ್ರತಾ ಕನ್ನಡಗಲ್, ಅರ್ಜುನನಾಗಿ ಹರ್ಷ ಬಾವಿಮನೆ, ಸಹದೇವನಾಗಿ ತೇಜಸ್ವಿನಿ ಸಾವಗದ್ದೆ, ಕುಂತಿಯಾಗಿ ಪಂಚಮಿ ಹಸರಪಾಲ, ಕರ್ಣನಾಗಿ ಪ್ರಣತಿ ಹಸರಪಾಲ ಪಾತ್ರ ನಿರ್ವಹಿಸಿದರು.

ದೇವಿ ಮೈದಾನ ಸಾರ್ವಜನಿಕ ಗಜಾನನೋತ್ಸವದ ಸಾಂಸ್ಕೃತಿಕ ಸಮಿತಿಯಿಂದ ಕಲಾವಿದರನ್ನು ಗೌರವಿಸಲಾಯಿತು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page