6

ಆಕಸ್ಮಿಕವಾಗಿ ಏರ್ ಗನ್ ಟ್ರಿಗರ್ ಒತ್ತಿದ ಮಕ್ಕಳು: 9 ವರ್ಷದ ಬಾಲಕ ಸಾವು

ಅಡಕೆ ತೋಟ ಕಾಯುವ ವ್ಯಕ್ತಿ ಬಗಲಿಗೆ ಹಾಕಿಕೊಂಡಿದ್ದ ಏರ್ ಗನ್ ನ ಟ್ರಿಗರ್ ನ್ನು ಬಾಲಕನೋರ್ವ ಒತ್ತಿ, ಎದುರು ನಿಂತಿದ್ದ ಇನ್ನೊಬ್ಬ ಬಾಲಕನಿಗೆ ಬಡಿದು ಸಾವನ್ನಪ್ಪಿದ ಘಟನೆ ಶಿರಸಿ ತಾಲೂಕಿನ ಸೋಮನಳ್ಳಿಯಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಕರಿಯಪ್ಪ ಎಂಬ 9 ವರ್ಷ ಬಾಲಕ ಮೃತಪಟ್ಟ ದುರ್ದೈವಿ. ಮೂಲತಃ ಹಾವೇರಿ ಜಿಲ್ಲೆಯ ತಿಪಟೂರಿನವರಾದ ಬಾಲಕನ ಕುಟುಂಬ ಸೋಮನಳ್ಳಿಯ ರಾಘವ ಹೆಗಡೆ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಶಾಲೆಗೆ ರಜೆ ಇದ್ದ ಕಾರಣ ಮಕ್ಕಳು ರಾಘವ ಹೆಗಡೆ ಅವರ ಮನೆ ಮುಂದೆ ಆಟವಾಡಿಕೊಂಡಿದ್ದರು.

 

ಈ ವೇಳೆ ನಿತೀಶ ಎಂಬವರು ತೋಟ ಕಾಯುವ ಸಲುವಾಗಿ ಏರ್ ಗನ್ ಹಿಡಿದು ಮನೆಯಂಗಳಕ್ಕೆ ಬಂದಿದ್ದರು. ಆಟವಾಡುತ್ತಿದ್ದ ಬಾಲಕರು ಏರ್ ಗನ್ ನ ಟ್ರಿಗರ್ ಜಗ್ಗಿಬಿಟ್ಟಿದ್ದಾರೆ. ಗುಂಡು ಎದುರು ನಿಂತಿದ್ದ ಬಾಲಕನ ಎದೆಗೆ ಬಡಿದು ಆತ ಅಲ್ಲಿಯೇ ಬಿದ್ದಿದ್ದಾನೆ.

ತಕ್ಷಣವೇ ಬಾಲಕನನ್ನು ಶಿರಸಿಯಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾನೆ

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page