6

ವಿಮಾನ ಚಿಟ್ಟೆ ಹಾಗೂ ಜಲಬದ್ಧ ಕೀಟಗಳ ವೈವಿಧ್ಯತೆ ಕುರಿತು ವಿಶೇಷ ಅಧ್ಯಯನ

ಯಲ್ಲಾಪುರ ತಾಲೂಕಿನ ಆನಗೋಡ ಗ್ರಾಮದ ಚಿಕ್ಕೊರಗಿಯಲ್ಲಿ ವಿಮಾನ ಚಿಟ್ಟೆ (ಡ್ರಾಗನ್‌ಫ್ಲೈಗಳು) ಮತ್ತು ಜಲಬದ್ಧಕೀಟಗಳು (ಡ್ಯಾಮ್‌ಸೆಲ್‌ಫ್ಲೈಗಳು)ಗಳ ವೈವಿಧ್ಯತೆಯ ಕುರಿತಂತೆ ವಿಶೇಷ ಅಧ್ಯಯನ ನಡೆಸಲಾಗಿದೆ.

ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಪದವಿಪೂರ್ವ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಕೆ. ನಾಗರಾಜ ಅವರು ಈ ಸಮೀಕ್ಷೆ ನಡೆಸಿ, ಈ ಪ್ರದೇಶದಲ್ಲಿ ಕಂಡುಬರುವ ಜೀವಿಗಳ ಮಾಹಿತಿ ಸಂಗ್ರಹಿಸಿದ್ದಾರೆ.

 

ಅಧ್ಯಯನದ ಫಲಿತಾಂಶದಲ್ಲಿ ಒಟ್ಟು 14 ಪ್ರಭೇದದ ವಿಮಾನ ಚಿಟ್ಟೆಗಳು ಮತ್ತು 5 ಪ್ರಭೇದದ ಜಲಬದ್ಧಕೀಟಗಳು ಇಲ್ಲಿ ಅಸ್ತಿತ್ವದಲ್ಲಿರುವುದು ದೃಢಪಟ್ಟಿದೆ. ಇವುಗಳನ್ನು ನೀರಿನ ತೀರ, ಹೊಲ ಹಾಗೂ ಪರಿಸರದ ವಿವಿಧ ಭಾಗಗಳಲ್ಲಿ ನೇರವಾಗಿ ಗಮನಿಸಿ ದಾಖಲಿಸಲಾಗಿದೆ. ಈ ಮಾಹಿತಿಗಳು ಸ್ಥಳೀಯ ಪರಿಸರದ ಸಮೃದ್ಧ ಜೀವ ವೈವಿಧ್ಯತೆಯನ್ನು ಹತ್ತಿರದಿಂದ ತೋರಿಸುತ್ತವೆ.

ವಿಮಾನ ಚಿಟ್ಟೆಗಳು ಸಾಮಾನ್ಯವಾಗಿ ಹೊಳೆಯ ತೀರ, ಹೊಲ ಹಾಗೂ ತೆರೆದ ಜಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡರೆ, ಜಲಬದ್ಧಕೀಟಗಳು ಶಾಂತವಾದ ಜಲಾಶಯಗಳಲ್ಲಿ ಹಾಗೂ ನೆರಳಿನ ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತವೆ. ಪ್ರತಿ ಜೀವಿಯ ವಾಸಸ್ಥಳವು ಅದರ ಜೀವನಚಕ್ರಕ್ಕೆ ಅನುಗುಣವಾಗಿರುವುದನ್ನು ಈ ಅಧ್ಯಯನ ಸ್ಪಷ್ಟಪಡಿಸಿದೆ.

ಈ ಸಂಶೋಧನೆ ಅವಗಾಹನವಾಗದ ಪ್ರದೇಶವಾದ ಆನಗೋಡ ಗ್ರಾಮ ಹಾಗೂ ಪಶ್ಚಿಮಘಟ್ಟ ಪ್ರದೇಶದ ಜೀವ ವೈವಿಧ್ಯತೆಯ ಮಹತ್ವವನ್ನು ಹೊರಹಾಕುತ್ತದೆ. ಜೊತೆಗೆ ಜಲಾಶಯಗಳ ಸಂರಕ್ಷಣೆ ಮತ್ತು ಪರಿಸರದ ಕಾಳಜಿಯ ಅಗತ್ಯತೆಯನ್ನು ಮತ್ತೊಮ್ಮೆ ನೆನಪಿಗೆ ತರುತ್ತದೆ. ಇಂತಹ ಅಧ್ಯಯನಗಳು ಭವಿಷ್ಯದಲ್ಲಿ ಪರಿಸರ ಸಂರಕ್ಷಣೆಯ ದಾರಿದೀಪವಾಗುವ ನಿರೀಕ್ಷೆ ವ್ಯಕ್ತವಾಗಿದೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page