6

ವೃಥಾ ಆರೋಪ ಮಾಡುವ ಎಂ.ಎಲ್.ಸಿ ಯಾರು? ಹೆಸರೇ ಹೇಳದೇ ಅಧ್ಯಕ್ಷರು ಪ್ರತಿಕ್ರಿಯೆ ನೀಡಿದ್ದು ಯಾರಿಗೆ?

ಯಲ್ಲಾಪುರ ತಾ.ಪಂ ಸಭಾಭವನದಲ್ಲಿ ನಡೆದ ತಾಲೂಕು ಗ್ಯಾರಂಟಿ ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ಬೆಲ್ತರಗದ್ದೆಯ ಬುಡಕಟ್ಟು ಸಮುದಾಯದ ಮಹಿಳೆ ಸಾವಿನ ವಿಚಾರ ಪ್ರತಿಧ್ವನಿಸಿತು.

ಹಿಂದೊಮ್ಮೆ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಎಂ.ಎಲ್.ಸಿ ವಿಷಯವನ್ನು ಅಧ್ಯಕ್ಷ ಉಲ್ಲಾಸ ಶಾನಭಾಗ ಮತ್ತೆ ಪ್ರಸ್ತಾಪಿಸಿದರು. ಎಂ.ಎಲ್.ಸಿ ಅವರು ಬೇರೆಯವರ ಬಗ್ಗೆ ವೃಥಾ ಆರೋಪ ಮಾಡದೇ, ಜಿಲ್ಲೆಯಲ್ಲಿ ಎಷ್ಟು ಸಿದ್ದಿ ಸಮುದಾಯದವರಿದ್ದಾರೆ, ಅವರಿಗೆ ಸರ್ಕಾರದ ಸೌಲಭ್ಯಗಳು ತಲುಪುತ್ತಿವೆಯೇ ಎಂಬುದನ್ನು ನೋಡಬೇಕೆಂದು ತಿಳಿಸಿದರು.

ಈ ಹಿಂದೆ ನಡೆದ ಸಭೆಯಲ್ಲೂ ಎಂ.ಎಲ್.ಸಿ ಅವರು ಬೆಲ್ತರಗದ್ದೆ ಮಹಿಳೆ ಸಾವಿನ ವಿಚಾರದಲ್ಲಿ ಜವಾಬ್ದಾರಿ ಅರಿತು ಮಾತನಾಡಬೇಕು ಎಂದು ಎಂ.ಎಲ್.ಸಿ ಅವರ ಸುದ್ದಿಯನ್ನೇ ಮಾತನಾಡಿದ್ದರು. ಆದರೆ ಎಂ.ಎಲ್.ಸಿ ಹೆಸರು ಮಾತ್ರ ಹೇಳಲಿಲ್ಲ. ಈ ದಿನವೂ ತಾಲೂಕು ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲೂ ಹಾಗೇ, ಎಂ.ಎಲ್.ಸಿ ಯಾರೆಂದು ಹೆಸರು ಹೇಳಿಲ್ಲ.

ಪಟ್ಟಣ ಪಂಚಾಯಿತಿ ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೂ ಅದೇ ಗೊಂದಲ ಉಂಟಾಗಿತ್ತು. ಯಾರೋ ಬಗ್ಗೆ ವೃಥಾ ಆರೋಪ ಮಾಡುವ ಎಂ.ಎಲ್.ಸಿ ಯಾರಿರಬಹುದೆಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಬೆಲ್ತರಗದ್ದೆ ಮಹಿಳೆ ಸಾವಿನ ನಂತರ ಎಂ.ಎಲ್.ಸಿ ಶಾಂತಾರಾಮ ಸಿದ್ದಿ ಪತ್ರಿಕಾಗೋಷ್ಠಿ ಮೂಲಕ ಗ್ಯಾರಂಟಿ ಸಮಿತಿಯ ಮೇಲೆ ಆರೋಪ ಮಾಡಿದ್ದರು. ಗ್ಯಾರಂಟಿ ಸಮಿತಿ ಅಧ್ಯಕ್ಷರು ಹೇಳಿದ ಎಂ.ಎಲ್.ಸಿ ಸಹ ಅವರೇ ಇರಬಹುದೆಂದು ವಿಶ್ಲೇಷಿಸಲಾಗುತ್ತಿದೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page