6

ಸರ್ಕಾರಿ ನೌಕರರ ಸಂಘದ ನೂತನ ಕಟ್ಟಡಕ್ಕೆ ಸಾಂಕೇತಿಕ ಭೂಮಿಪೂಜೆ

ಯಲ್ಲಾಪುರದ ಸರ್ಕಾರಿ ನೌಕರರ ಭವನದ ನೂತನ ಕಟ್ಟಡದ ಭೂಮಿಪೂಜೆಯನ್ನು ಸಾಂಕೇತಿಕವಾಗಿ ಗುರುವಾರ ನೆರವೇರಿಸಲಾಯಿತು.

ಭೂಮಿಪೂಜೆ ನೆರವೇರಿಸಿ ಮಾತನಾಡಿದ ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ, ಸಂಘದ ಬಹುದಿನದ ಕನಸಾದ ನೂತನ ಕಟ್ಟಡ ಕಾಮಗಾರಿಯನ್ನು 6 ತಿಂಗಳೊಳಗೆ ಪೂರೈಸುವ ಉದ್ದೇಶ ಹೊಂದಿದ್ದೇವೆ. ನೂತನ ಕಟ್ಟಡ ಅಂಗಡಿ ಸಂಕೀರ್ಣ ಹಾಗೂ ಸಭಾಭವನವನ್ನು ಒಳಗೊಂಡಿರುತ್ತದೆ. ಮೊದಲ ಹಂತದಲ್ಲಿ 1.59 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದರು.

ಅರ್ಚಕ ನಾಗೇಂದ್ರ ಭಟ್ಟ ಪೂಜೆ ನೆರವೇರಿಸಿದರು. ಸಂಘದ ಗೌರವಾಧ್ಯಕ್ಷ ಸುಭಾಶ ನಾಯಕ, ಹಿರಿಯ ಉಪಾಧ್ಯಕ್ಷ ನಾರಾಯಣ ನಾಯಕ, ಕಾರ್ಯದರ್ಶಿ ಶರಣಪ್ಪ ಗೊಜನೂರು, ಖಜಾಂಚಿ‌ ವಿಶಾಲ ನಾಯಕ, ಜಂಟಿ ಕಾರ್ಯದರ್ಶಿಗಳಾದ ವೆಂಕಟರಮಣ ಭಟ್ಟ, ಮಹೇಶ ತಾಳಿಕೋಟಿ, ಆಂತರಿಕ ಲೆಕ್ಕ ಪರಿಶೋಧಕಿ ವೀರವ್ವ ಪೂಜಾರಿ, ನಿರ್ದೇಶಕರಾದ ಅಜಿತ ನಾಯಕ, ದಿನೇಶ ಭಟ್ಟ, ಜಿ.ಸಂತೋಷ, ಸರ್ಕಾರಿ ನೌಕರರಾದ ವಿನಾಯಕ ಗಾಂವ್ಕರ, ಅಮಿತ್ ಚೌಹಾಣ, ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page