6

ರಸ್ತೆಯ ಹೊಂಡಗಳಿಗೆ ಮುಕ್ತಿ ನೀಡಿದ ನಾಗಣ್ಣ, ಸುಬ್ಬಣ್ಣ

ಯಲ್ಲಾಪುರ ತಾಲೂಕಿನಾದ್ಯಂತ ಗ್ರಾಮೀಣ ಭಾಗದ ರಸ್ತೆಗಳ ದುಸ್ಥಿತಿಯಿಂದಾಗಿ ವಾಹನ ಸವಾರರು ಏಳುತ್ತ ಬೀಳುತ್ತ ಸಾಗಬೇಕಾಗಿದೆ. ಸದ್ಯದ ಮಟ್ಟಿಗೆ ಸರ್ಕಾರದಿಂದ ರಸ್ತೆಯ ದುರಸ್ತಿ ಆಗಬಹುದೆಂಬ ನಿರೀಕ್ಷೆ ಮಾಡುವುದೂ ಮಹಾರಪರಾಧ! ಹಾಗಾಗಿ ಗ್ರಾಮೀಣ ಪ್ರದೇಶದ ಅಲ್ಲಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರೇ ತಾತ್ಕಾಲಿಕ ದುರಸ್ತಿಗೆ ಮುಂದಾಗುತ್ತಿದ್ದಾರೆ.‌

ಯಲ್ಲಾಪುರದ ಎಪಿಎಂಸಿಯಿಂದ ಹಲಸಖಂಡ-ಗುಂಡ್ಕಲ್ ರಸ್ತೆ ಹೊಂಡ-ಗುಂಡಿಗಳಿಂದಲೇ ತುಂಬಿ ಕೆಸರು ಗದ್ದೆಯಂತಾಗಿತ್ತು. ಜನ ಓಡಾಡಲು ತುಂಬಾ ಕಷ್ಟಪಡಬೇಕಾಗಿತ್ತು. ಹುಲೆಕೋಣೆ ಬಳಿಯಂತೂ ದೊಡ್ಡ ಹೊಂಡಗಳೇ ಉಂಟಾಗಿ, ಮಳೆಯ ನೀರೂ ಹೊಂಡದಲ್ಲಿ ನಿಂತು, ರಸ್ತೆಯಲ್ಲೇ ಕೆರೆಗಳ ನಿರ್ಮಾಣವಾದಂತೆ ಕಂಡು ಬರುತ್ತಿತ್ತು.

ಈ ರಸ್ತೆ ಅವ್ಯವಸ್ಥೆಗೆ ತಾತ್ಕಾಲಿಕವಾದ ಪರಿಹಾರ ಒದಗಿಸಲು ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ, ಚಂದಗುಳಿ ಗ್ರಾ.ಪಂ ಸದಸ್ಯ ಸುಬ್ಬಣ್ಣ ಉದ್ದಾಬೈಲ ಅವರು ಮುಂದಾಗಿದ್ದು, ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಿಸಿದ್ದಾರೆ. ರಸ್ತೆಯ ಹೊಂಡಗಳಿಗೆ ಮಣ್ಣು ಹಾಕಿ ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಈ ಕೆಲಸಕ್ಕಾಗಿ ನಾಗರಾಜ ಕವಡಿಕೆರೆ ಅವರು ತಮ್ಮ ಜೆಸಿಬಿ ನೀಡಿದ್ದು, ಸುಬ್ಬಣ್ಣ ಉದ್ದಾಬೈಲ್ ಮಣ್ಣು ಸಾಗಿಸಲು ಟ್ರ್ಯಾಕ್ಟರ್ ನೀಡಿದ್ದಾರೆ. ಇನ್ನಷ್ಟು ಹೊಂಡಗಳನ್ನು ಮುಚ್ಚುವ ಕಾರ್ಯಕ್ಕೆ ನೆರವಾಗುವ ಭರವಸೆಯನ್ನು ಎಪಿಎಂಸಿ ಮಾಜಿ ಅಧ್ಯಕ್ಷ ಎಲ್.ಪಿ.ಭಟ್ಟ ಗುಂಡ್ಕಲ್ ನೀಡಿದ್ದಾರೆ.

ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದಾದರೂ, ದುರಸ್ತಿಗೆ ಮೂರು ಕಾಸೂ ಬಾರದ ಕಾರಣ, ಸ್ಥಳೀಯ ಮುಖಂಡರೇ ರಸ್ತೆ ದುರಸ್ತಿಗೆ ಮುಂದಾಗುವ ಅನಿವಾರ್ಯತೆ ಬಂದಿರುವುದು ಸರ್ಕಾರದ ದುರವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page