6

`ಜನಸಾಮಾನ್ಯರ ಪಾಲಿಗೆ ಗೃಂಥಗಳು ದಾರಿದೀಪ’

`ಗೃಂಥಗಳು ಜನಸಾಮಾನ್ಯರ ಬದುಕಿಗೆ ದಾರೀದೀಪಗಳಾಗಿದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅಶೋಕೆಯ ವಿವಿವಿ ಆವರಣದಲ್ಲಿ ಅನಾವರಣ ಚಾತುಮಾಸ್ಯದ ಎರಡನೇ ದಿನ ಗುರುಗ್ರಂಥ ಮಾಲಿಕೆಯ ಅನಾವರಣ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು, `ವಿರಾಟ್ ವಿಶ್ವವಿದ್ಯಾಪೀಠದ ಮೂಲ ಆಶಯವೇ ಅಮೂಲ್ಯ ಗ್ರಂಥಗಳನ್ನು ಉಳಿಸುವುದಾಗಿದೆ’ ಎಂದರು. ಕಾಲ ಎಂಬ ವಿಷಯದ ಬಗ್ಗೆ ಪ್ರವಚನ ಅವರು `ಕಾಲಕ್ಕೆ ಇರುವ ಶಕ್ತಿ ಬೇರಾರಿಗೂ ಇರಲಾರದು. ಸುಖ ಹಾಗೂ ದುಃಖ ಚಕ್ರವಿದ್ದಂತೆ’ ಎಂದು ಹೇಳಿದರು.
`ಮಹಾಭಾರತ ಯುದ್ಧದಲ್ಲಿ ಎರಡೂ ಕಡೆಗಳ ಅಸಂಖ್ಯಾತ ಮಂದಿ ಸಾವನ್ನಪ್ಪಿದ ಘಟನೆಯನ್ನು ನೆನೆದು ಧರ್ಮರಾಯ ಪಶ್ಚಾತ್ತಾಪ ಪಡುತ್ತಾನೆ. ಮಕ್ಕಳು, ಮೊಮ್ಮಕ್ಕಳು, ಸೋದರರು, ಚಿಕ್ಕಪ್ಪ-ದೊಡ್ಡಪ್ಪಂದಿರು, ಹೆಣ್ಣು ಕೊಟ್ಟ ಮಾವಂದಿರು, ಸೋದರಮಾವ, ಗುರುಗಳು, ಅಜ್ಜಂದಿರು ಎಲ್ಲರನ್ನೂ ಸಿಂಹಾಸನಕ್ಕಾಗಿ ಸಾಯಿಸಿದೆ ಎಂದು ದುಃಖಿಸುತ್ತಾನೆ. ದೇಹ ಅಳಿದುಹೋಗುವಂಥ ತಪಸ್ಸು ಮಾಡುತ್ತೇನೆ ಎಂಬ ನಿರ್ಧಾರಕ್ಕೆ ಬಂದ. ಅದರೆ ವಾಸ್ತವವಾಗಿ ಕಾಲ ಧರ್ಮರಾಜನಿಂದ ಎಲ್ಲವನ್ನೂ ಮಾಡಿಸಿರುತ್ತಾನೆ. ಪಾಪದ ಲವಲೇಶವೂ ಆತನಿಗೆ ತಟ್ಟುವುದಿಲ್ಲ’ ಎಂದರು.

  • Related Posts

    ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ

    Share this… Facebook Pinterest Twitter Linkedin Whatsapp*ಗಂಗಾಮತ ಸಮಾಜ ಒಗ್ಗಟ್ಟಾದರೆ ಒಳ್ಳೆಯ ಭವಿಷ್ಯ ಇದೆ: ಬಸವರಾಜ ಬೊಮ್ಮಾಯಿ* *ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬಸವರಾಜ ಬೊಮ್ಮಾಯಿ* ಹಾವೇರಿ: ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ…

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    Leave a Reply

    Your email address will not be published. Required fields are marked *

    You cannot copy content of this page