6

ಅಮಾಯಕನನ್ನು ಬಲಿ ಪಡೆದ ಅಪಘಾತ

ಯಲ್ಲಾಪುರ: ಸೋಮವಾರ ಮಧ್ಯಾಹ್ನ ಆರ್ತಿಬೈಲ್ ಘಟ್ಟದ ಹೆಬ್ಬಾರ್ ಕ್ರಾಸಿನ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ರಾಘವೇಂದ್ರ ಮಹಾಬಲೇಶ್ವರ ಘಟ್ಟಿ (45) ಎಂಬಾತರು ಸಾವನಪ್ಪಿದ್ದಾರೆ.
ಜುಲೈ 22ರಂದು ಮಧ್ಯಾಹ್ನ 2ಗಂಟೆಗೆ ಧಾರವಾಡದ ಅರ್ಜುನ ಕೆರಕನವರ್ ಎಂಬಾತ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆ ಚಲಾಯಿಸಿಕೊಂಡು ಬರುತ್ತಿದ್ದ ಟಾಟಾ ಎಂಟ್ರಾ ವಾಹನ ಇಡಗುಂದಿ ಜನತಾ ಕಾಲೋನಿಯಲ್ಲಿ ವಾಸವಾಗಿದ್ದ ರಾಘವೇಂದ್ರ ಘಟ್ಟಿ ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟಿಗೆ ಡಿಕ್ಕಿಯಾಗಿತ್ತು. ಮುಂದೆ ಹೋಗುತ್ತಿದ್ದ ಲಾರಿಯನ್ನು ಓವರ್‌ಟೆಕ್ ಮಾಡುವುದಕ್ಕಾಗಿ ವೇಗವಾಗಿ ಗಾಡಿ ಓಡಿಸಿದ ಟಾಟ ಎಂಟ್ರಾ ವಾಹನದ ಚಾಲಕ ಸ್ಕೂಟಿಗೆ ಗುದ್ದಿದ್ದರಿಂದ ರಾಘವೇಂದ್ರ ಘಟ್ಟಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಗಾಯಗೊಂಡವರನ್ನು ಯಲ್ಲಾಪುರ ಆಸ್ಪತ್ರೆಗೆ ಕರೆತಂದು, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದೊಯ್ಯುವಾಗ ಸಾವನಪ್ಪಿದ್ದಾರೆ.

  • Related Posts

    ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ

    Share this… Facebook Pinterest Twitter Linkedin Whatsapp*ಗಂಗಾಮತ ಸಮಾಜ ಒಗ್ಗಟ್ಟಾದರೆ ಒಳ್ಳೆಯ ಭವಿಷ್ಯ ಇದೆ: ಬಸವರಾಜ ಬೊಮ್ಮಾಯಿ* *ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬಸವರಾಜ ಬೊಮ್ಮಾಯಿ* ಹಾವೇರಿ: ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ…

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    Leave a Reply

    Your email address will not be published. Required fields are marked *

    You cannot copy content of this page