6

ಸಾಲ ಮಾಡಿ ಮಗನ ಮದುವೆ ಮಾಡಿದ ಮೀನುಗಾರ: ಸಾಲ ತೀರಿಸದೇ ತಾಯಿಗೆ ಹಲ್ಲೆ ಮಾಡಿದ ಪುತ್ರ

ಭಟ್ಕಳ: ಬೆಳ್ನಿ ದೊಡ್ಡಯ್ಯನಮನೆಯ ಮಂಜಪ್ಪ ಮೊಗೇರ್ ಮಗನ ಮದುವೆಗಾಗಿ 5 ಲಕ್ಷ ರೂ ಸಾಲ ಮಾಡಿ ಸುಸ್ತಾಗಿದ್ದಾರೆ.
ಮದುವೆಗೂ ಮುನ್ನ ಸಾಲ ತೀರಿಸುವುದಾಗಿ ಒಪ್ಪಿಕೊಂಡಿದ್ದ ಮಂಜಪ್ಪ ಅವರ ಮಗ ರಮೇಶ ಇದೀಗ `ಸಾಲಕ್ಕೂ ನನಗೂ ಸಂಬAಧವೇ ಇಲ್ಲ’ ಎನ್ನುತ್ತಿದ್ದಾನೆ. `ಸಾಲ ತೀರಿಸು’ ಎಂದು ಬುದ್ದಿ ಹೇಳಿದ ತಾಯಿಗೆ ಕೆಟ್ಟದಾಗಿ ಬೈದು ಹಲ್ಲೆ ಮಾಡಿದ್ದಾನೆ.
ಮೀನುಗಾರಿಕೆ ನಡೆಸಿ ಬದುಕುಕಟ್ಟಿಕೊಂಡಿದ್ದ 65 ವರ್ಷದ ಮಂಜಪ್ಪ ಮೊಗೇರ್ ತಮ್ಮ ಪತ್ನಿ ಹೆಸರಿನಲ್ಲಿದ್ದ ಭೂಮಿ ಅಡವಿಟ್ಟು ಸಾಲ ಪಡೆದಿದ್ದರು. ಮದುವೆ ಆದ ನಂತರ ಮಂಜಪ್ಪ ಅವರ ಮನೆಯಲ್ಲಿಯೇ ರಮೇಶನೂ ಪತ್ನಿ ಹಾಗೂ ಮಗುವಿನ ಜೊತೆ ವಾಸವಾಗಿದ್ದ. ಆದರೆ, ಸಾಲವನ್ನು ಮಾತ್ರ ತೀರಿಸಿರಲಿಲ್ಲ. ಸಾಲ ತೀರಿಸುವಂತೆ ಹೇಳಿದಾಗ ಅದೇ ಮನೆಯಲ್ಲಿ ಬೇರೆ ಅಡುಗೆ ಮಾಡಿಕೊಳ್ಳಲು ಶುರು ಮಾಡಿದ್ದ. ತಂದೆ-ತಾಯಿಗೆ ಅಗತ್ಯವಿರುವ ಬಟ್ಟೆಯನ್ನು ಸಹ ಆತ ಕೋಡಿಸುತ್ತಿರಲಿಲ್ಲ.
ಹೀಗಿರುವಾಗ ಸಾಲ ಪಾವತಿಸುವಂತೆ ಬ್ಯಾಂಕಿನಿoದ ನೋಟಿಸ್ ಬಂದಿದ್ದು, ಜುಲೈ 22ರಂದು `ಸಾಲ ತೀರಿಸು’ ಎಂದು ಆತನ ತಾಯಿ ಬುದ್ದಿ ಹೇಳಿದ್ದಾರೆ. ಆಗ, ಸಿಟ್ಟಾದ ರಮೇಶ ತಾಯಿಗೆ ಬೈದು ಹಲ್ಲೆ ಮಾಡಿದ್ದು, ಆಕೆಯ ಎಡಗೈ ಮುರಿದಿದೆ. ಮೊಖಕ್ಕೆ ಸಹ ಗಾಯವಾಗಿದೆ. ಈ ಬಗ್ಗೆ ಮಂಜಪ್ಪ ಮೊಗೇರ್ ಮಗನ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.

  • Related Posts

    ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ

    Share this… Facebook Pinterest Twitter Linkedin Whatsapp*ಗಂಗಾಮತ ಸಮಾಜ ಒಗ್ಗಟ್ಟಾದರೆ ಒಳ್ಳೆಯ ಭವಿಷ್ಯ ಇದೆ: ಬಸವರಾಜ ಬೊಮ್ಮಾಯಿ* *ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬಸವರಾಜ ಬೊಮ್ಮಾಯಿ* ಹಾವೇರಿ: ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ…

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    Leave a Reply

    Your email address will not be published. Required fields are marked *

    You cannot copy content of this page