6

ಸರ್ಕಾರಿ ನೌಕರನಿಂದ ಮಹಿಳೆಗೆ ವಂಚನೆ: 22 ಲಕ್ಷ ರೂ ಕಳೆದುಕೊಂಡು ಜೀವಭಿಕ್ಷೆ ಬೇಡಿದ ಸಂತ್ರಸ್ತೆ

ಕುಮಟಾ: ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಪ್ರಥಮದರ್ಜೆ ಸಹಾಯಕನಾಗಿ ಕೆಲಸ ಮಾಡುವ ಎನ್ ಎಸ್ ಅಮರ ಸುಬ್ರಾಯ ನಾಯಕ ಎಂಬಾತ ವಿವೇಕನಗರ ಮಾಲಶ್ರೀ ಪ್ರಕಾಶ್ ರಾತೋಡ್ ಎಂಬಾತರಿಗೆ ಜಮೀನು ಮಾರಾಟ ಮಾಡುವುದಾಗಿ ನಂಬಿಸಿ 22.20 ಲಕ್ಷ ರೂ ವಂಚನೆ ಮಾಡಿದ್ದು, ಈ ಹಣ ಮರಳಿಸುವಂತೆ ಒತ್ತಾಯಿಸಿದಾಗ ಜಾತಿ ನಿಂದಿಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಸಂತ್ರಸ್ತೆ ದೂರಿದ್ದಾರೆ.
ಅಂಕೋಲಾದ ಪುರಮಕ್ಕಿ ಬೇಣದ ನಿವಾಸಿಯಾಗಿರುವ ಎನ್ ಎಸ್ ಅಮರ ಸುಬ್ರಾಯ ನಾಯಕ ಜುಲೈ 20ರಂದು ಸಂಜೆ 5.30ಕ್ಕೆ ಕುಮಟಾ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ತನ್ನದೇ 5 ಗುಂಟೆ ಭೂಮಿ ಕೊಡುವುದಾಗಿ ತಿಳಿಸಿದ್ದ. ಇದಕ್ಕಾಗಿ 2220000ರೂ ಹಣವನ್ನು ಪಡೆದಿದ್ದ. ಆದರೆ, ನಂತರ ಭೂಮಿ ಕೊಡದೇ ಹಣವನ್ನು ಹಿಂತಿರುಗಿಸಲು ನಿರಾಕರಿಸಿದ್ದ. ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿ ಮಹಿಳೆಯನ್ನು ಉದ್ದೇಶಿಸಿ `ನೀನು ಕುಲಗೆಟ್ಟ ಜಾತಿಯವಳು’ ಎಂದು ನಿಂದಿಸಿದ್ದಲ್ಲದೇ, `ನಿನ್ನನ್ನು ನಿನ್ನ ಕುಟುಂಬದವರನ್ನು ಇಲ್ಲದಂತೆ ಮಾಡುವುದು ದೊಡ್ಡ ವಿಷಯವಲ್ಲ’ ಎಂದು ಹೇಳಿದ್ದಾನೆ. ಜೊತೆಗೆ `ಕುಮಟಾದಲ್ಲಿ ಹೇಗೆ ಜೀವಂತವಾಗಿರುವೆ? ನೋಡುತ್ತೇನೆ’ ಎಂದು ಬೆದರಿಕೆ ಒಡ್ಡಿದ್ದಾನೆ ಎಂದು ಸಂತ್ರಸ್ತೆ ಪೊಲೀಸ್ ದೂರು ನೀಡಿದ್ದಾರೆ.

  • Related Posts

    ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ

    Share this… Facebook Pinterest Twitter Linkedin Whatsappಹಾವೇರಿ: ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಮೋಹನ ಲಿಂಬಿಕಾಯಿ ಅವರ ಪರವಾಗಿ ಕಾಂಗ್ರೆಸ್ ಮುಖಂಡರು ಹಾಗೂ ಪದವೀಧರ ಘಟಕದ ಪದಾಧಿಕಾರಿಗಳು ಹಾವೇರಿ ನಗರದ ಪ್ರತಿಷ್ಠಿತ ಹುಕ್ಕೇರಿಮಠ ಪದವಿಪೂರ್ವ ಹಾಗೂ ಪದವಿ…

    ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ

    Share this… Facebook Pinterest Twitter Linkedin Whatsapp*ಗಂಗಾಮತ ಸಮಾಜ ಒಗ್ಗಟ್ಟಾದರೆ ಒಳ್ಳೆಯ ಭವಿಷ್ಯ ಇದೆ: ಬಸವರಾಜ ಬೊಮ್ಮಾಯಿ* *ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬಸವರಾಜ ಬೊಮ್ಮಾಯಿ* ಹಾವೇರಿ: ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ…

    Leave a Reply

    Your email address will not be published. Required fields are marked *

    You cannot copy content of this page