6

ಉತ್ಪಾದಕರಿಗೆ ಹಗಲು-ರಾತ್ರಿ ಉಚಿತ ವಿದ್ಯುತ್: ಸಂಕಷ್ಟ ಅನುಭವಿಸಿದವರಿಗೆ ಮಾತ್ರ ನಿರಾಸೆ!

ಹೊನ್ನಾವರ: ವಿದ್ಯುತ್ ನಿಗಮವು ಗೇರುಸೊಪ್ಪದಲ್ಲಿ ವಾಸಿಸುವ ನಿಗಮದ ಸಿಬ್ಬಂದಿಗೆ 24 ಗಂಟೆ ಉಚಿತ ವಿದ್ಯುತ್ ನೀಡುತ್ತಿದ್ದು, ವಿದ್ಯುತ್ ಯೋಜನೆಗೆ ಸಂಕಷ್ಟ ಅನುಭವಿಸಿದವರಿಗೆ ಈ ಭಾಗ್ಯವಿಲ್ಲ.
ಶರಾವತಿ ನದಿ ಪಾತ್ರದ ಜನರು ಜಲವಿದ್ಯುತ್ ಯೋಜನೆಗಾಗಿ ಸರ್ವಸ್ವವನ್ನು ತ್ಯಜಿಸಿದ್ದಾರೆ. ಆ ಭಾಗದಲ್ಲಿ ನಿರಂತರ ನೆರೆಯಿಂದ ಅಲ್ಲಿನವರು ಸಮಸ್ಯೆಯಲ್ಲಿದ್ದಾರೆ. ಅದಾಗಿಯೂ ಅವರಿಗೆ ನಿರಂತರ ವಿದ್ಯುತ್ ಪೂರೈಸಲು ಸಾಧ್ಯವಾಗಿಲ್ಲ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಶರಾವತಿ ನದಿಪಾತ್ರದ ಜನ ತೊಂದರೆಗೆ ಸಿಲುಕಿದ್ದಾರೆ. ಮಳೆಗಾಲದಲ್ಲಿ ಒಮ್ಮೆಯೂ ಇಡೀ ದಿನ ವಿದ್ಯುತ್ ಪೂರೈಸಲು ಸಾಧ್ಯವಾಗಿಲ್ಲ. ಗೇರುಸೊಪ್ಪದಲ್ಲಿ ವಿದ್ಯುತ್ ಉತ್ಪಾದನೆ ನಡೆದರೂ ನೂರಾರು ಮೈಲಿಗಳ ದೂರದ ಗ್ರಿಡ್‌ಗಳಿಂದ ನದಿಪಾತ್ರಕ್ಕೆ ಅಸಮರ್ಪಕ ರೀತಿ ವಿದ್ಯುತ್ ತಂತಿ ಎಳೆಯಲಾಗಿದೆ. ಆದರೆ, ಅಲ್ಲೇ ಸಮೀಪದಲ್ಲಿರುವ ನಿಗಮದ ಸಿಬ್ಬಂದಿಗೆ ಮಾತ್ರ ಯಾವುದೇ ಸಮಸ್ಯೆ ಆಗದಂತೆ ಹಗಲು ರಾತ್ರಿ ವಿದ್ಯುತ್ ಪೂರೈಸಲಾಗುತ್ತದೆ.
ಶರಾವತಿ ಸಂತ್ರಸ್ತರಿಗೆ ಸಹ ಅಂಡರ್‌ಗ್ರೌoಡ್ ಕೇಬಲ್ ಮೂಲಕ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಅಂಡರ್ ಗ್ರೌಂಡ ಆಲ್ ಸೀಜನಲ್ ಕೇಬಲ್‌ಗಳನ್ನು ಅಳವಡಿಸಿ ವಿದ್ಯುತ್ ವಿತರಣಾ ಜಾಲವನ್ನು ಪುನಶ್ಚೇತನಗೊಳಿದರೆ ವಿದ್ಯುತ್ ವಿತರಣೆಯಲ್ಲಿನ ಸೋರಿಕೆ ತಪ್ಪುತ್ತದೆ. ಕಡಿಮೆ ವೆಚ್ಚದಲ್ಲಿ ನಿರಂತರ ವಿದ್ಯುತ್ ಪೂರೈಕೆ ಸಹ ಸಾಧ್ಯ ಎಂಬುದು ಶರಾವತಿ ನೆರೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಕಾAತ ಕೊಚರೇಕರ ಅವರ ಅಭಿಮತ.

 

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    Leave a Reply

    Your email address will not be published. Required fields are marked *

    You cannot copy content of this page