6

ಅಕ್ರಮ ಅಡ್ಡೆಗೆ ದೊಡ್ಡವರ ಆಶೀರ್ವಾದ: ಸರಾಯಿ ಅಂಗಡಿ ನಾಶಕ್ಕೆ ಅಂಗಲಾಚಿದ ಮಹಿಳೆಯರು!

ಮುಂಡಗೋಡ: ಆನಂದನಗರದಲ್ಲಿ ಅನಧಿಕೃತವಾಗಿ ಸರಾಯಿ ಮಾರಾಟ ಅಂಗಡಿಯಿರುವ ಬಗ್ಗೆ ಎಲ್ಲರಿಗೂ ಅರಿವಿದ್ದರೂ ಅದನ್ನು ತೆರವು ಮಾಡುವ ಧೈರ್ಯ ಯಾರಿಗೂ ಇಲ್ಲ!
ಕಳೆದ ಅನೇಕ ವರ್ಷಗಳಿಂದ ದೇವಸ್ಥಾನದ ಅಂಚಿನಲ್ಲಿ ಸರಾಯಿ ಅಡ್ಡೆಯಿದ್ದರೂ ಅದನ್ನು ಜನಪ್ರತಿನಿಧಿಗಳು ಪ್ರಶ್ನಿಸಿಲ್ಲ. ಜನಸ್ಪಂದನಾ ಸಭೆಯಲ್ಲಿ ಈ ಬಗ್ಗೆ ಅಲ್ಲಿನ ಮಹಿಳೆಯರು ಈ ಬಗ್ಗೆ ಅಳಲು ತೋಡಿಕೊಂಡರು. `ಆನಂದ ನಗರದಲ್ಲಿ ಕೆಲವರು ಎಗ್ಗಿಲ್ಲದೇ ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ಅವರು ಯಾರ ಮಾತು ಕೇಳುತ್ತಿಲ್ಲ. ಅವರಿಗೆ ಯಾರ ಭಯವೂ ಇಲ್ಲ. `ದೊಡ್ಡವರ’ ಕೃಫೆಯಿಂದಲೇ ಇದೆಲ್ಲವೂ ನಡೆಯುತ್ತಿದೆ’ ಎಂದು ಕ್ಷೇತ್ರದ ಜನಸ್ಪಂದನಾ ಸಭೆಯಲ್ಲಿ ದೂರಿದರು. ಅದರಂತೆ `ಇನ್ನೂ ಎರಡು ಕಡೆ ಸರಾಯಿ ಅಂಗಡಿಯಿದ್ದು, ದೇವಸ್ಥಾನದ ಮತ್ತು ಶಾಲೆಯ ಅಸುಪಾಸಿನಲ್ಲಿ ವ್ಯವಹಾರ ನಡೆಯುತ್ತಿದೆ’ ಎಂದು ದೂರಿದರು.
`ಅಕ್ರಮ ಸರಾಯಿ ಅಡ್ಡೆಯಿಂದಾಗಿ ಆಸುಪಾಸಿನ ಜನರಿಗೆ ಕಿರಿಕಿರಿಯಾಗಿದೆ. ಮಹಿಳೆಯರು ಈ ಭಾಗದಲ್ಲಿ ಓಡಾಡುವುದೇ ಕಷ್ಟವಾಗಿದೆ’ ಎಂದು ಅಳಲು ತೋಡಿಕೊಂಡರು. ಮಹಿಳೆಯರ ಮನವಿ ಸ್ವೀಕರಿಸಿದವರು ಇದಕ್ಕೆ ತಲೆಯಾಡಿಸಿದರು.

  • Related Posts

    ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ

    Share this… Facebook Pinterest Twitter Linkedin WhatsappCHO ಸಂಘದ ಮುಷ್ಕರದಲ್ಲಿ ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ HIO, PHCO ಸಿಬ್ಬಂದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಧಿಕಾರಿಗಳಿಗೆ ಮನವಿ ಹಾವೇರಿ: CHO ಸಂಘದ ವತಿಯಿಂದ ನಡೆಯುತ್ತಿರುವ…

    ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ

    Share this… Facebook Pinterest Twitter Linkedin Whatsappಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಬೇಡಿಕೆ ಈಡೇರಿಸದಿದ್ದರೆ ಹೆದ್ದಾರಿ ಬಂದ್ ಮಾಡಿ ಉಗ್ರ ಹೋರಾಟ: ಕಬ್ಬು ಬೆಳೆಗಾರರು ಹಾವೇರಿ: ಕಬ್ಬಿನ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ…

    Leave a Reply

    Your email address will not be published. Required fields are marked *

    You cannot copy content of this page