6

ಸೇವೆಗೆ ಹೆಸರಾದ ಸೇವಾದಳ: ಶಿಕ್ಷಕರ ಕಾರ್ಯಕ್ಕೆ ಮಾಜಿ ಶಾಸಕ ಮೆಚ್ಚುಗೆ

ಮುಂಡಗೋಡ: `ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಶಿಸ್ತು ಹಾಗೂ ದೇಶಪ್ರೇಮ ಕಲಿಸಬೇಕು. ಇದಕ್ಕೆ ಸೇವಾದಳ ಸಹಕಾರಿ’ ಎಂದು ಮಾಜಿ ಶಾಸಕ ವಿ ಎಸ್ ಪಾಟೀಲ ಹೇಳಿದರು.
ಶನಿವಾರ ಭಾರತ ಸೇವಾದಳದ ಶಿಕ್ಷಕ – ಶಿಕ್ಷಕಿಯರ ಪುನಶ್ಚೇತನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು `ಪ್ರತಿಯೊಬ್ಬರಿಗೂ ಜೀವನದಲ್ಲಿ ಶಿಸ್ತು ಅಗತ್ಯ. ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸುವುದರ ಜೊತೆಗೆ ದೇಶಪ್ರೇಮದ ಬಗ್ಗೆಯೂ ಶಿಕ್ಷಕರು ಕಲಿಸಬೇಕು. ಸೇವಾದಳದ ಸೇವೆ ಎಲ್ಲರಿಗೂ ಮಾದರಿ’ ಎಂದು ಹೇಳಿದರು.
ಕೆ.ಎನ್.ಹೊಸಮನಿ ಉಪನ್ಯಾಸ ನೀಡಿ `ಶಿಕ್ಷಕರು ಶ್ರದ್ಧೆ, ಭಕ್ತಿಯಿಂದ ಕೆಲಸ ಮಾಡಬೇಕು’ ಎಂದರು. ಭಾರತ ಸೇವಾದಳದ ತಾಲೂಕ ಘಟಕದ ಅಧ್ಯಕ್ಷ ರಾಮಕೃಷ್ಣ ಮೂಲಿಮನಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಲ್.ಟಿ.ಪಾಟೀಲ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಜಿ.ಎನ್.ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕ ವಿಜಯಕುಮಾರ್ ಶೆಟ್ಟಿ, ಮುಖಂಡರಾದ ಜ್ಞಾನೇಶ್ವರ ಗುಡಿಯಾಳ, ಭಾರತ ಸೇವಾದಳದ ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ, ತಾಲೂಕಾ ಸಂಘಟಕ ಎನ್.ಎಸ್.ಹೆಗಡೆ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ದಯಾನಂದ ನಾಯ್ಕ, ಪ್ರದೀಪ್ ಕುಲಕರ್ಣಿ, ಮಂಜುನಾಥ ಕಲಾಲ, ವಿನಾಯಕ ಶೇಟ, ಸಿ.ಕೆ.ಅಶೋಕ, ಶ್ರೀಧರ ಹೆಗಡೆ ಇತರರು ಇದ್ದರು.
ಶಿಕ್ಷಕ ಕೆ.ಕೆ.ಕರುವಿನಕೊಪ್ಪ ಸ್ವಾಗತಿಸಿದರು. ರಾಜೇಂದ್ರ ಗಾಣಿಗ ನಿರ್ವಹಿಸಿದರು.

 

  • Related Posts

    ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ

    Share this… Facebook Pinterest Twitter Linkedin Whatsapp*ಗಂಗಾಮತ ಸಮಾಜ ಒಗ್ಗಟ್ಟಾದರೆ ಒಳ್ಳೆಯ ಭವಿಷ್ಯ ಇದೆ: ಬಸವರಾಜ ಬೊಮ್ಮಾಯಿ* *ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬಸವರಾಜ ಬೊಮ್ಮಾಯಿ* ಹಾವೇರಿ: ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ…

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    Leave a Reply

    Your email address will not be published. Required fields are marked *

    You cannot copy content of this page