6

ಸ್ಪೋಟದ ಸದ್ದಿಗೆ ನಡುಗಿದ ತಂಡ್ರಕುಳಿ: ಪರ್ಯಾಯ ಜಾಗದ ಬೇಡಿಕೆಗೆ ಅಸ್ತು!

ಕುಮಟಾ: `ತಂಡ್ರಕುಳಿ ಗ್ರಾಮಸ್ಥರು ಪರ್ಯಾಯ ಜಾಗದ ವಾಸ್ತವ್ಯಕ್ಕಾಗಿ ಸರಕಾರಕ್ಕೆ ಸಲ್ಲಿಸಿದ ಬೇಡಿಕೆಯನ್ನು ಶೀಘ್ರದಲ್ಲಿಯೇ ಈಡೇರಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಆರ್ ಕೆ ಅಂಬಿಗ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸಚಿವ ಮಂಕಾಳು ವೈದ್ಯರಿಗೆ ಅವರು ಮನವಿ ಸಲ್ಲಿಸಿದರು. `2017ರಲ್ಲಿ ತಂಡ್ರಕುಳಿಯಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿ ಸಲುವಾಗಿ ಬಂಡೆಗಳನ್ನು ಒಡೆಯಲಾಗಿದೆ. ಈ ವೇಳೆ ಸ್ಪೋಟಕಗಳನ್ನು ಬಳಸಿದ್ದರಿಂದ ಮನೆಗಳಿಗೆ ಹಾನಿಯಾಗಿದೆ. ಈಗಲೂ ಅದೇ ಮನೆಯಲ್ಲಿ ಜನ ಅಪಾಯಕಾರಿ ರೀತಿಯಲ್ಲಿ ವಾಸಿಸುತ್ತಿದ್ದು, ಅವರಿಗೆ ಪರ್ಯಾಯ ಜಾಗ ಕಲ್ಪಿಸುವ ಬೇಡಿಕೆಯಿತ್ತು. ಆ ಪ್ರಸ್ತಾವನೆಗೆ ಸರ್ಕಾರ ಒಪ್ಪಿ, ಇದೀಗ ಉಪವಿಭಾಗಾಧಿಕಾರಿ ಕಚೇರಿ ತಲುಪಿದೆ. ಬೇರೆ ಕಡೆ ಕಂದಾಯ ಜಾಗವನ್ನು ಗುರುತಿಸಲಾಗಿದ್ದು, ಅದನ್ನು ಜನರಿಗೆ ಮಂಜೂರಿ ಮಾಡಿಕೊಡುವ ಕೆಲಸ ಬಾಕಿಯಿದೆ. ಶೀಘ್ರದಲ್ಲಿ ಜಾಗ ಮಂಜೂರಿ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಸಚಿವ ಮಂಕಾಳು ವೈದ್ಯ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುವ ಭರವಸೆ ನೀಡಿದರು. ತಂಡ್ರಕುಳಿ ಅಂಬಿಗ ಸಮಾಜದ ಅಧ್ಯಕ್ಷ ಗಣಪಯ್ಯ ನಾಗು ಅಂಬಿಗ, ಪದಾಧಿಕಾರಿಗಳಾದ ರಾಮ ಎಚ್ ಅಂಬಿಗ, ರಾಘವೇಂದ್ರ ಎ ಅಂಬಿಗ, ರಮೇಶ ಆರ್ ಅಂಬಿಗ, ಗಣಪತಿ ಎಸ್ ಅಂಬಿಗ ಇದ್ದರು.

  • Related Posts

    ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ

    Share this… Facebook Pinterest Twitter Linkedin Whatsapp*ಗಂಗಾಮತ ಸಮಾಜ ಒಗ್ಗಟ್ಟಾದರೆ ಒಳ್ಳೆಯ ಭವಿಷ್ಯ ಇದೆ: ಬಸವರಾಜ ಬೊಮ್ಮಾಯಿ* *ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬಸವರಾಜ ಬೊಮ್ಮಾಯಿ* ಹಾವೇರಿ: ಗಂಗಾಮತ ಸಮಾಜಕ್ಕೆ ದೊಡ್ಡ ಶಕ್ತಿ ತುಂಬಬೇಕೆಂದರೆ ಎಲ್ಲರೂ ಒಂದಾಗಿ ಒಂದೇ…

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    Leave a Reply

    Your email address will not be published. Required fields are marked *

    You cannot copy content of this page